ಬೆಳಕಿಂಡಿ
Showing posts with label
ಹನಿ ಕಿಂಡಿ
.
Show all posts
Showing posts with label
ಹನಿ ಕಿಂಡಿ
.
Show all posts
Sunday, 9 June 2013
ಜ್ಞಾನೋದಯ
ಬುದ್ಧನಾಗಲು
ಕಾಡಿಗೇ ಹೋಗಬೇಕಂತಿಲ್ಲ;
ಶ್ರದ್ಧೆಯಿದ್ದರೆ
ಮನೆಯ ಮಾಡಿನ ಕೆಳಗೂ
ಆಗಬಹುದು ಜ್ಞಾನೋದಯ!
ಯಾನ
ಮಲ್ಯರ ವಿಮಾನ
ತೇಲದಿದ್ದರೂ
ಆಗಸದಲಿ,
ತೇಲುತ್ತಿದ್ದಾರೆ
ಅವರ
ಬೀರು ಕುಡಿದವರೆಲ್ಲ
ಗಾಳಿಯಲಿ!
ಖುಷಿ
ಸಖೀ, ಒಮ್ಮೊಮ್ಮೆ
ಯಾರಾದರೂ ನಮ್ಮ
ಕಾಲೆಳೆಯುತ್ತಿದ್ದರೆ
ಕೆಲವರಿಗೆ ಅದ ನೋಡುವುದು
ಭಾರೀ ಖುಷಿ;
ಇರಲಿ ಖುಷಿ ಪಡಲಿ,
ಅವರ ಖುಷಿಯೇ
ನಮ್ಮ ಖುಷಿ!
ಆಶಯ
ಸಿದ್ರಾಮಯ್ಯನವರಿಗೆ
ಶುಭ ಹಾರೈಕೆ,
ಆಗಲಿ ಕರ್ನಾಟಕ
ಅಭಿವೃದ್ಧಿಯ ತಾವು;
ಮರೆಯಾಗದಿರಲಿ
ರಾಜ್ಯದಲ್ಲಿ ಗೋವು!
ಮಳೆ
ವರ್ಷ ಧಾರೆ,
ಭೂಮಿಯ ಘಮ;
ನಿನ್ನ ಕಣ್ಣ
ಮಿಂಚು!
ರಿಷಿ"ಕಾ"
ಯಕ್ಷಗಾನ ಪದ್ಯಗಳ "ಡಬ್ಬಾ"
ಎಂದಳಂತೆ
ಮಹಾ ಮೇಧಾವಿ ರಿಷಿಕಾ;
ಕಲೆಯ ಅರ್ಥೈಸಿಕೊಳ್ಳಲೂ
ಯೋಗ್ಯತೆ ಬೇಕು
ಕಿರುಚಿದಂತಲ್ಲ
ಬಿಗ್ ಬಾಸ್ ನಲ್ಲಿ "ಕಾ ಕಾ"!
ಚೆಕ್ಕು ಬುಕ್ಕು
ಅಂದು ಮನೆಗೆ
ಹೋದೊಡನೆ
ಪ್ರೀತಿಯ ಸುರಿಮಳೆ,
ರಾಜ ಸತ್ಕಾರ ಸಿಕ್ಕಿತ್ತು;
ಏನು ವಿಶೇಷ ಎಂದು
ಯೋಚನೆ ಮಾಡುತ್ತಿದ್ದೆ-
ನನ್ನೆದುರು ಖಾಲಿ ಚೆಕ್ಕಿತ್ತು!
ಕರ ಕರ
ಸರ್ಕಾರ ಹೇಳುತ್ತದೆ-
"ಸಮಯಕ್ಕೆ ಸರಿಯಾಗಿ
ಆದಾಯ ಕರ ಕಟ್ಟಿ";
ದಿನ ಬಳಕೆ ವಸ್ತುಗಳ
ದರ ಮಾತ್ರ
ದಿನೇ ದಿನೇ ತುಟ್ಟಿ!
ಬೈನರಿ
ಮದುವೆಯ ಹೊಸತರಲಿ
ಮಾತು ಮಾತಿಗೂ
"ಚಿನ್ನು, ಡಾರ್ಲಿಂಗ್, ಮರಿ";
ಕೆಲವು ವರುಷಗಳ ಬಳಿಕ
ಮಾತುಗಳು ಕಡಿಮೆ
ಏನಿದ್ದರೂ ಬೈನರಿ!
ಸರಕಾರ
ಲಕ್ಷಗಟ್ಟಲೆ ಖರ್ಚು
ಮಾಡಿ ಪ್ರಮಾಣ ವಚನ
ಸ್ವೀಕಾರ;
ಬಳಿಕ ಪ್ರಮಾಣ ಮಾಡಿದ
ಕೈಯಿಂದಲೇ
ಲಂಚ ಸ್ವೀಕಾರ!
ವಿಪರ್ಯಾಸ
ಲಂಚ ಪಡೆಯುತ್ತ,
ಕೊಡುತ್ತ ಇರುವವರಿಗೆ
ಸ್ವರ್ಗ;
ನಿಷ್ಠಾವಂತರಿಗೆ
ಬೇರೆ ಕಡೆ ವರ್ಗ!
ಶ್ರೀ
ರನ್ ಹೊಡೆಯಲಾಗದೆ
ತಂಡದಿಂದ ಹೊರಗಾಗಿದ್ದಕ್ಕೆ
ಸೆಹ್ವಾಗ್ ಚಿಂತಾಕ್ರಾಂತ;
ಇತ್ತ ನೋ ಬಾಲ್ ಹಾಕಿಯೇ
ಶ್ರೀಮಂತನಾದ ಶ್ರೀಶಾಂತ!
ದರ್ಜಿ
ಕವಿಯಾಗಲಿ ಸಮಾಜದ
ಒಡಕುಗಳ ಬೆಸೆಯುವ ದರ್ಜಿ;
ಪ್ರಶಸ್ತಿಗಳಿಗಾಗಿ ಅರ್ಜಿ
ಹಾಕುವುದಷ್ಟೇ
ಆಗದಿರಲವನ ಮರ್ಜಿ!
ಒಂದೇ ಉತ್ತರ
ಮನೆಗೆ ತಡವಾಗಿ ಬಂದ
ಗಂಡನಿಗೆ ಆಕೆ ಕೇಳಿದಳು-
"ಯಾಕೆ ಇಂದು ತಡ ರೀ?";
ಮರು ಯೋಚಿಸದೆ ಆತನೆಂದ-
"ಸಾರೀ ಸಾರೀ ಸಾರೀ"!
ಫಿಕ್ಸಿಂಗ್
ಶ್ರೀಶಾಂತ
ಕರವಸ್ತ್ರ ತೋರಿಸಿ
ಮಾಡಿದ ಫಿಕ್ಸಿಂಗ್;
ನಮ್ಮ ರಾಜಕಾರಣಿಗಳೂ
ಮಾಡುತ್ತಾರೆ
ಖಾದಿ ವಸ್ತ್ರ ತೋರಿಸಿ!
ವಿನಂತಿ
ಫಿಕ್ಸಿಂಗ್ ನ ಸಂತೆ
ಐ. ಪಿ. ಎಲ್ ಹೆಸರಲ್ಲಿ
ಅದೆಷ್ಟು ದುಡ್ಡು ಪುಡಿ;
ಮುಂದಿನ ವರ್ಷ
ಆಡುವುದು ಬೇಡ
ನೇರ ಫಲಿತಾಂಶ ಹೇಳಿ ಬಿಡಿ!
ಮುತ್ತು
ನೀನಿರುವಾಗ ನನಗೇಕೆ
ಮುತ್ತು, ರತ್ನ, ಹವಳ;
ನಿನ್ನ ಮುತ್ತೇ ರತ್ನ, ಹವಳ!
ಸಮರಸ
ಇತ್ತೀಚಿಗೆ ಹೆಚ್ಚಾಗಿದೆ
ಬಿಸಿಲುರಿ,
ಜಾತಿವಾದದ ದಳ್ಳುರಿ-
ತಣಿಸಲು ಬೇಕಾಗಿದೆ:
ನಿಂಬೆ ರಸ, ಕಿತ್ತಳೆ ರಸ,
ಜೊತೆಗೆ ಸಮರಸ!
ನಮ್ಮ ಅ(ವ್ಯ)ವಸ್ಥೆ
ಹಿಂದಿನ ಅವಧಿಯಲ್ಲಿ
ಮುಕ್ಕಿ ತಿಂದಿದ್ದು
ಇನ್ನೂ ಆಗಿರಲಿಲ್ಲ ಪಚನ;
ಅಷ್ಟರಲ್ಲೇ
ಮತ್ತೆ ಮಂತ್ರಿಯಾಗಿ
ಪ್ರಮಾಣ ವಚನ!
ಮಕ್ಕಳು ಹೂಗಳು
ಮಕ್ಕಳು ಹೂಗಳಿದ್ದಂತೆ
ಎಂದು ಹೇಳಿದರು
ಜವಾಹರಲಾಲ ನೆಹರು;
ಅವರವರ ಮಕ್ಕಳನ್ನು
ಹೂಗಳಂತೆಯೇ
ನೋಡಿಕೊಳ್ಳುತಿಹರವರ
ಕುಟುಂಬದವರು!
Older Posts
Home
Subscribe to:
Posts (Atom)