Tuesday 20 September 2011

ಭ್ರಷ್ಟಾಚಾರದ ಬೇರು


"ಈ ರಾಜಕಾರಣಿಗಳ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಹೋರಾಡಿ ಏನು ಪ್ರಯೋಜನವಿಲ್ಲ . ಇದು ಕೊಚ್ಚೆಗುಂಡಿಗೆ ಕೈ ಹಾಕಿದಂತೆ " ಎಂದು ಜನ ಸಾಮಾನ್ಯರು ಮಾತನಾಡುವುದು, ಅದನ್ನು ನಾವು ಕೇಳಿ ಆ ಅಭಿಪ್ರಾಯದೊಡನೆ ನಮ್ಮ ತಲೆಗೂಡಿಸುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಭ್ರಷ್ಟಾಚಾರ ಹೆಮ್ಮರವಾಗಿ ದೇಶವನ್ನೇ ನುಂಗುತ್ತಿರುವ ಈ ಪರಿಸ್ಥಿತಿಯಲ್ಲಿ ,   ಭ್ರಷ್ಟಾಚಾರದ ವಿರುದ್ಧ ತೀವ್ರವಾದ ಹೋರಾಟ ನಡೆಯುತ್ತಿರುವ ಈ ಸಂದರ್ಭದಲ್ಲಿ ನಾವು  ಭ್ರಷ್ಟಾಚಾರದ ಬೇರನ್ನು ಹುಡುಕುವ ಕೆಲಸ ಮಾಡಬೇಕಾಗಿದೆ.

ಜನ ಸಾಮಾನ್ಯರಾದ ನಾವು ನಮ್ಮ ಪ್ರತಿ ಕಾರ್ಯ ಕೈಗೂಡಿಸಿಕೊಳ್ಳುವಲ್ಲಿ  ಒಂದಲ್ಲ ಒಂದು ರೀತಿಯಲ್ಲಿ ಭ್ರಷ್ಟಾಚಾರದಲ್ಲಿ  ಭಾಗಿಯಾಗಿರುತ್ತೇವೆ . ಇದು ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಹಾಸ್ಯಾಸ್ಪದವಾಗಿ ಹೇಳುವುದಾದರೆ, ಪರೀಕ್ಷೆಯಲ್ಲಿ ಉತ್ತಮ ಅಂಕ ಬಂದರೆ ೧೦೦ ರೂಪಾಯಿಯ ಸೇವೆ ಮಾಡಿಸುತ್ತೇನೆಂದು, ದಯವಿಟ್ಟು ಪಾಸು ಮಾಡಿಸೆಂದು, ನಮ್ಮಲ್ಲಿ ಎಷ್ಟು ಜನ ದೇವರಲ್ಲಿ ಬೇಡಿಕೆ ಇಟ್ಟಿಲ್ಲ !. ಈ ವಿಚಾರದಲ್ಲಿ ನನ್ನ ಆದರ್ಶ ವ್ಯಕ್ತಿಯಾಗಿರುವ ನನ್ನ ಸಹಕರ್ಮಿಯೊಬ್ಬರ ಉದಾಹರಣೆ ನೀಡದಿದ್ದರೆ ತಪ್ಪಾದೀತು. ಈ ಮಹಿಳೆ ಡ್ರೈವಿಂಗ್ ಲೈಸನ್ಸ್ ಮಾಡಿದಿಕೊಳ್ಳಲು ಹೋಗುತ್ತಾರೆ. ಅರ್ಜಿಯನ್ನು ತುಂಬಿ ಚೆನ್ನಾಗಿ ಪರೀಕ್ಷೆಯನ್ನು ಎದುರಿಸುತ್ತಾರೆ. ಆದರೆ ರೂಢಿಯಂತೆ ಸಂಚಾರಿ ಇನ್ಸ್ಪೆಕ್ಟರ್ ಲಂಚವನ್ನು ಕೇಳುತ್ತಾನೆ. ಇದು ನಮ್ಮ ನಿಮ್ಮೆಲ್ಲರ ಜೀವನದಲ್ಲಿ ನಡೆಯುವ , ನಡೆದಿರುವ ಸಾಮಾನ್ಯ ಘಟನೆ. ಆದರೆ ನಾವು ಇದಕ್ಕೆ ಪ್ರತಿಕ್ರಿಯಿಸುವ ರೀತಿ ಮಾತ್ರ ಬೇರೆ. ಆದರೆ ಆ ಮಹಿಳೆ ಲಂಚ ಕೊಡಲು ಖಡಾಖಂಡಿತವಾಗಿ ನಿರಾಕರಿಸುತ್ತಾರೆ. ಆ ಚಿಕ್ಕ ಮೊತ್ತದ ಲಂಚ ಕೊಟ್ಟು ಕೈ ತೊಳೆದು ಕೊಳ್ಳುವುದು ಆಕೆಗೇನು ದೊಡ್ಡ ವಿಷಯವಲ್ಲ. ಮುಂದಿನ ಸಲ ಮತ್ತೆ ಪರೀಕ್ಷೆ . ಮತ್ತದೇ ದೃಶ್ಯ ಮರುಕಳಿಸುತ್ತದೆ. ಏನಕ್ಕೂ ಹಿಂಜರಿಯದ ಆಕೆ ತನ್ನ ಆದರ್ಶದ ಜೊತೆಗಿರುತ್ತಾಳೆ. ಕೊನೆಗೆ ಮೂರನೇ ಸಲ ಮತ್ತೆ ಅರ್ಜಿ ಮತ್ತು ಶುಲ್ಕ ತುಂಬಿ ಲೈಸನ್ಸ್ ಪಡೆದುಕೊಳ್ಳುತ್ತಾಳೆ. ಆ ಸಂಚಾರ್ಇನ್ಸ್ಪೆಕ್ಟರ್ ಬಂದು ಆಕೆಗೆ  ಹೇಳುತ್ತಾನೆ -"ಮೊದಲನೇ ಸಲ ನನ್ನ ಜೇಬಿಗೆ ಹಾಕಿದ್ದರೆ ಮುಗಿದು ಹೋಗಿತ್ತಲ್ಲ. ಈಗ ನೋಡು. ಮೂರು ಸಲ ಶುಲ್ಕ ತುಂಬಿ ನಿನ್ನ ಕೆಲಸವೂ ಡಬಲ್ ಆಯ್ತು. ಸಮಯವೂ ವ್ಯಯವಾಯ್ತು. ".   ಆಕೆ ದಕ್ಷತೆಯಿಂದ ಉತ್ತರಿಸುತ್ತಾಳೆ- "ಪರವಾಗಿಲ್ಲ. ಆ ದುಡ್ಡು ನಿನ್ನ ಜೇಬಿಗೆ ಹೋಗಲಿಲ್ಲವಲ್ಲ, ಸರಕಾರಕ್ಕೆ ಹೋಯಿತಲ್ಲ ಎನ್ನುವ ಖುಷಿಯಿದೆ. ನ್ಯಾಯದಿಂದ ಲೈಸನ್ಸ್ ಪಡೆದುಕೊಂಡ ತ್ರಪ್ತಿಯಿದೆ.ಅಷ್ಟು ಸಾಕು. " ಅವಳಲ್ಲಿ ಧನ್ಯತಾ ಮನೋಭಾವವಿತ್ತು. ತಾನು ಸರಿಯಾದ ದಾರಿಯಲ್ಲಿ ನಡೆದೆ ಎಂಬ ತೃಪ್ತಿ ಇತ್ತು. ಇದು ಮುಂದೆ ಸಹ ಇಂತಹ ಹಲವಾರು ಸನ್ನಿವೇಶಗಳಲ್ಲಿ ಕೆಚ್ಚೆದೆಯಿಂದ ತನ್ನ ಹಕ್ಕನ್ನು ಪಡೆದುಕೊಳ್ಳುವಲ್ಲಿ ಅವರಿಗೆ ಸಹಕರಿಸಿತು.

ನಮ್ಮಲ್ಲಿ ಎಷ್ಟು ಜನ ಈ ದಿಶೆಯಲ್ಲಿ ಯೋಚಿಸುತ್ತೇವೆ. ಕೆಲಸ ಮುಗಿದರೆ ಸಾಕೆಂದು ಅದೇ ಲಂಚಕೋರತನವನ್ನು ಮುಂದುವರೆಸಿಕೊಂಡು ಹೋಗುತ್ತೇವೆ. ಪ್ರಾಥಮಿಕವಾಗಿ ಯೋಚಿಸಿದರೆ ನಮ್ಮ ಈ ಮನೋಭಾವವೇ ಬಹುಶಃ 
ಭ್ರಷ್ಟಾಚಾರ ಇಂತಹ ಹೆಮ್ಮರವಾಗಿ ಬೆಳೆಯುವಂತೆ ಮಾಡಿತೇನೋ ಎಂದನಿಸುತ್ತದೆ.ಭ್ರಷ್ಟಾಚಾರದ ಬಗ್ಗೆ ದೊಡ್ಡ ದೊಡ್ಡ  ಮಾತನಾಡುವ ಬದಲು , ಇದನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಪೊಳ್ಳು ವಾದವನ್ನು ಮಾಡುವ ಬದಲು ಇಂತಹ ಚಿಕ್ಕ ಚಿಕ್ಕ ಸಂದರ್ಭಗಳಲ್ಲಿ ನಿಸ್ವಾರ್ಥವಾಗಿ, ಆದರ್ಶವಾದಿಯಾಗಿ  ಹೋರಾಡುವುದು ಅತ್ಯಗತ್ಯ. ಯಾಕೆಂದರೆ ಇದು ಭ್ರಷ್ಟಾಚಾರದ ಬೇರು. ಜನ ಸಾಮಾನ್ಯರಿಗೆ ಈ ಬೇರನ್ನು ಅಲ್ಲಾಡಿಸುವ ಶಕ್ತಿಯಿದೆ. ಬೇರಿಲ್ಲದೆ ಮರ ನಿಲ್ಲಲು ಅಸಾಧ್ಯ . ಅ ಬೇರನ್ನು ಕಿತ್ತು ಒಗೆಯೋಣ. ಭ್ರಷ್ಟಾಚಾರ ಮುಕ್ತ ಸುಭದ್ರ ಭಾರತವನ್ನು ಕಟ್ಟೋಣ.

4 comments:

  1. Well written Paresh!

    Just to add to it, I believe that just shouting slogans against corruption is not going to help. It needs every one to participate and ensure that this is eradicated from root.

    There needs to be accountability for every penny one earns and one spends.

    ReplyDelete
  2. ee tarahada kannada seve anukarneeya..ninna baraha anweshaneeya.."aachara heli badnekayi tinno" paapigalige ninna katheyinda swalpadru talamala untagali manassinalli-lancha koduvaga.nija,lancha namma talmeya korathe,asadde,alasya mattu duraseyinda beleyuttade.

    Hege barita iru ...
    oduvadu nama santosha

    Inti,
    Palaksh

    ReplyDelete
  3. ಸರಿಯಾದ ಮಾತು.
    ದುಃಖದ ವಿಷಯ ಅಂದ್ರೆ, ಈ ರೀತಿ ಆದರ್ಶವಾದಿಯಾಗಿ ಇದ್ದುಕೊಂಡು ಜೀವನ ನಡೆಸೋದು ಜನಸಾಮಾನ್ಯರಿಗೆ ಕಷ್ಟ ಸಾಧ್ಯದ ಮಾತು.
    ನಮ್ಮ ಕೆಲಸ ಜಂಜಾಟ, ತಾಪತ್ರಯದಲ್ಲಿ ಬಹಳಷ್ಟು ಜನರಿಗೆ ಪ್ರತಿರೋಧ ಒಡ್ಡಲು ಸಾಧ್ಯವಾಗುತ್ತಿಲ್ಲ.
    ಆದ್ರೆ ನಾವೆಲ್ಲರೂ ಮಾಡಬಹುದಾದಂತ ಸುಲಭದ ಕೆಲಸ ಅಂದ್ರೆ ಜನಾದೇಶ. ಸರಿಯಾದ ಸರಕಾರವನ್ನ ಅಧಿಕಾರಕ್ಕೆ ತಂದು, ನಮ್ಮ ಕರ್ತವ್ಯದ ಸ್ವಲ್ಪ ಪಾಲನ್ನಾದ್ರೂ ನೆರವೆರಿಸೋಣ :) )

    ReplyDelete
  4. Very well written Paresh. Thanks for sharing !!.. Keep blogging :)

    ReplyDelete