Sunday 12 February 2012

ಎಲ್ಲಿರುವೆ ನೀ ನನ್ನೊಲವೆ???




ವರುಷಗಳುರುಳುತಿವೆ, ಹೂವರಳಿ ಬಾಡುತಿವೆ
ನೀನೇಕೆ ಕಾಡುತಿಹೆ ಸಿಗದೆ ಎನಗೆ 
ವಿರಹ ವೇದನೆಯದುವು ಜೋರಾಗಿ ಹೃದಯದಲಿ 
ನಡುಗಿಸುವ ಹಿಮ ಗಾಳಿ ಎದೆಯ ಒಳಗೆ 

ಮಾನಸದ ಗೋಡೆಯಲಿ ನಿನ ಚಿತ್ರ ಬರೆದಿರುವೆ 
ಹೇಗಿರುವೆ ನೀನೆಂದು ತಿಳಿಯದೆನಗೆ 
ನಿನ್ನ ಮಾತನು ಕೇಳುವಾಸೆಯಲಿ ಕಾಯುತಿಹೆ 
ಕ್ಷಣದಲ್ಲಿ ಓಗೊಡಲು ನಿನ್ನ ಕರೆಗೆ 

ಗುಂಡಿಗೆಯ ಒಳಗೊಂದು ಜೋಕಾಲಿ ಜೀಕುತಿದೆ 
ನಿನಗಾಗಿ ಪರಿತಪಿಸಿ ಸೋತಿರುವುದು 
ಮಾನಸ ಸರೋವರದ ಚೆಂದ ಕಮಲದ ಹೂವು 
ರಾಣಿಯಾ ದರ್ಶನಕೆ ಕಾದಿರುವುದು 

ನೋವು ನಲಿವುಗಳಲ್ಲಿ, ಸೋಲು ಗೆಲುವುಗಳಲ್ಲಿ 
ಅಪ್ಪುಗೆಯ ಸವಿಗಾಗಿ ಹಾತೊರೆದಿಹೆ 
ತನ್ನೊಳಗೆ ನನ್ನನ್ನು ಕಾಣುವಾ ದೇವಿಯವಳಾ-
ಸರೆಯ ಅಕ್ಕರೆಯ ಕಾಯುತಲಿಹೆ 

ನಿನ್ನ ಅಚ್ಚದನು ಕೆತ್ತಾಗಿದೆಯೆ ಹೃದಯದಲಿ
ತಪಿಸುತಿಹೆ ನಿನ ಪಡೆಯೋ ಆಶಯದಲಿ 
ಓ ನಲ್ಲೆ ನೀ  ಯಾವ ಘಳಿಗೆಗದು ಕಾಯುತಿಹೆ
ಎಲ್ಲಿರುವೆ ನನ್ನೊಲವೆ ಈ ಭುವಿಯಲಿ??!!!

3 comments:

  1. ಹಂತ ಹಂತವಾಗಿ ನಿಮ್ಮ ಲೇಖನಿಯ ಪಕ್ವತೆ ಖುಷಿ ಆಗುತ್ತಿವೆ.ಇದರ ಹಿಂದೆ ಶ್ರಮವಿದೆ, ಓದುವಿಕೆ ಇದೆ,ತಾಳ್ಮೆಯಿದೆ. ತುಂಬಾ ಸುಂದರವಾಗಿದೆ ಭಾವಗಳನ್ನು ಲಯಗಳಲ್ಲಿ ತೆರೆದಿಟ್ಟ ಕ್ರಮ. ಅಭಿನಂದನೆಗಳು.

    ReplyDelete
  2. ಸರಾಫರೇ ಕವಿತೆ ತುಂಬಾ ಚೆನ್ನಾಗಿದೆ
    ಓದಿ ಖುಷೀ ಆಯ್ತು ಗುಂಡಿಗೆಯ ಒಳಗೊಂದು ಜೋಕಾಲಿ ಜೀಕುತಿದೆ
    ನಿನಗಾಗಿ ಪರಿತಪಿಸಿ ಸೋತಿರುವುದು
    ಮಾನಸ ಸರೋವರದ ಚೆಂದ ಕಮಲದ ಹೂವು
    ರಾಣಿಯಾ ದರ್ಶನಕೆ ಕಾದಿರುವುದು

    ನೋವು ನಲಿವುಗಳಲ್ಲಿ, ಸೋಲು ಗೆಲುವುಗಳಲ್ಲಿ
    ಅಪ್ಪುಗೆಯ ಸವಿಗಾಗಿ ಹಾತೊರೆದಿಹೆ
    ತನ್ನೊಳಗೆ ನನ್ನನ್ನು ಕಾಣುವಾ ದೇವಿಯವಳಾ-
    ಸರೆಯ ಅಕ್ಕರೆಯ ಕಾಯುತಲಿಹೆ

    ReplyDelete
  3. ಇನ್ನೂ ಸಿಕ್ಕಿರದ ಪ್ರಿಯ ನಲ್ಲೆಯ ಧ್ಯಾನದಲ್ಲಿ ಬರೆದಂತಹ ಪ್ರೇಮ ಗೀತೆ, ತುಂಬಾ ಚೆನ್ನಾಗಿ ಬಂದಿದೆ ಪರೇಶಣ್ಣ.. ಭಾವಗಳು ಕಲ್ಪನೆಯರಳಿದ್ದರೂ ಅವುಗಳಿಗೆ ಜೀವ ತುಂಬಿ ಕುಣಿಸಿದ್ದೀರಿ.. ಕಲ್ಪನೆಗಳು ಸುಂದರವಾಗಿ ಅರಳಿ ಮನಸ್ಸಿಗೆ ಮುದ ನೀಡುತ್ತವೆ.. ನಿಮ್ಮ ಲೇಖನಿಯಿಂದರಳುವ ಪ್ರೇಮ ಕವಿತೆಗಳನ್ನು ಅಸ್ವಾದಿಸುವುದೇ ಒಂದು ಚೆಂದ, ಸಮಾಜಮುಖಿ ಧಾರೆಗಳನ್ನಷ್ಟೇ ಅಲ್ಲದೆ ಭಾವಗಳ ಸುಂದರ ಅಭಿವ್ಯಕ್ತಿಗಳನ್ನೂ ಅರಳಿಸಬಲ್ಲಿರಿ ಎಂಬುದನ್ನು ಸಾರಿ ಹೇಳುತ್ತದೆ ಕವಿತೆ.. ಕವಿತೆಯಲ್ಲಿನ ಭಾವಗಳ ಒಳ ತೋಟಿ ತುಂಬಾ ಹಿಡಿಸುತ್ತದೆ.. ಕನಸ್ಸಿನಲ್ಲಿ ಕಾಡುವ ಕನ್ಯೆ ಕಾಗದದ ಮೇಲೆ ಕಾವ್ಯದಲ್ಲಿ ಬಂಧಿಯಾದ ಪರಿ ಮನಸ್ಸಿಗೆ ಮುದ ನೀಡಿತು, ತುಂಬಾ ಚೆನ್ನಾಗಿದೆ ಕವಿತೆ..:)))

    ReplyDelete