ಭಯಾನಕ ದೃಶ್ಯವ
ನೋಡಿದ
ಪ್ರಚೋದನೆ
ಥಟ್ಟನೆ ತಟ್ಟಿತ್ತು
ಅಮೈಗ್ದಲವೆಂಬ
ಮೆದುಳಿನ ಚಿಕ್ಕ ಗೂಡನು
ಛಕ್ಕನೆ ಹಾರಿದಂತಾಯ್ತು
ಜೀವ
---
ಅನಾಥ ಕಂದನ
ತಲೆಯ ಮೆತ್ತಗೆ
ಸವರಿ, ಮುತ್ತಿಕ್ಕಿದಾಗ
ಒಕ್ಸಿಟೋಸಿನ್ ಸ್ರವಿಕೆಯ
ಪರಿಣಾಮ
ಹೊಸ ಪ್ರೀತಿಯ ಭರವಸೆ
ಕಂದನ ಮನಸು
ನಿರಾಳ
---
ವರ್ಷಗಳ ಬಳಿಕ
ನನ್ನವಳ ಮುಖ ನೋಡಿದ
ಕ್ಷಣಕೆ
ಎನ್ದೊರ್ಫಿನ್
ಸ್ರವಿಸಿ
ರಕ್ತದ ಕಣ ಕಣದಿ
ಸಂತಸದ ಹೊನಲು
---
ಜೀವದ ಗೆಳೆಯ
ಜೀವವಿಲ್ಲದೆ ಬಿದ್ದ ಪರಿಯ
ನೋಡಿ, ಒಳಗೆ
ಪ್ರೊಲಾಕ್ಟಿನ್ ಸ್ರಾವ
ಕಣ್ಣೀರ ಕಟ್ಟೆಯೊಡೆದು
ಗದ್ಗದಿತ ಭಾವ
---
ಯೌವ್ವನ
ಟೆಸ್ಟೋಸ್ಟಿರಾನ್ ಸ್ರವಿಕೆ
ಹುಚ್ಚು ಮನ
ಹತ್ತು ಹಲವು ಪ್ರಚೋದನೆ
ಕುತೂಹಲಗಳ
ನಡುವೆ
ಮನದ ಹಿಡಿತ ಮೀರಿದ ದೇಹ
ಹುಟ್ಟಿಸಿತ್ತು
ಇನ್ನೊಂದು ಜೀವ
ವಿಭಿನ್ನ ಪ್ರಯತ್ನ ಪರೇಷ್. ನಿಮ್ಮ ಯೋಚನಾಲಹರಿ ಮೆಚ್ಚತಕ್ಕದ್ದು
ReplyDelete