Saturday 14 July 2012

ಮತ್ತೆ ಬರಲಿ ಮುಂಗಾರು



ಮತ್ತೆ ಬರಲಿ ಮುಂಗಾರು 
ಹೊತ್ತು ನೂರು ಕನಸು 
ಬಿಸಿಲ ಬೇಗೆಯೆಲ್ಲ ತಣಿದು 
ಹಸನಾಗಲಿ ಮನಸು 

ಅನ್ನದಾತ ಖಿನ್ನನಾಗಿ 
ಬೇಡುತಿಹನು, ಉಳಿಸು 
ಸ್ಥಬ್ಧಳಾಗಿ ಕುಳಿತೆಯಲ್ಲ
ಇನ್ನು ಏಕೆ ಮುನಿಸು?

ಜೀವ ರಾಶಿ ಭಾವರಹಿತ 
ಹೊಸ ಚಿಲುಮೆಯ ಹರಿಸು 
ಕೋಪದಲ್ಲಿ ಸುಡುವ ಭುವಿಯ 
ನಲ್ಮೆಯಿಂದ ತಣಿಸು 

2 comments:

  1. ಮುಂಗಾರು ಹೀಗೆ ಕೈ ಕೊಡುತ್ತೆ ಅಂದುಕೊಂಡಿರಲಿಲ್ಲ. ಅದರ ಪುನರಾಗಮನಕ್ಕಾಗಿ ಒಳ್ಳೆಯ ಪ್ರಾರ್ಥನಾ ಗೀತೆ ಇದು.

    ReplyDelete
  2. ನೀರಿಲ್ಲದೆ ಬರಡಾದ ಇಳೆಯೆಡೆಗೆ ದೃಷ್ಠಿ ನೆಟ್ಟ ರೈತನ ಬೆನ್ನು ತಟ್ಟಿ ಆಶಾಭಾವ ಹೊಮ್ಮಿಸುವ ಪ್ರಯತ್ನ ಮಾಡಿದ್ದೀರಿ.. ರೈತ ಕೃತಜ್ಞನಾಗುತ್ತಾನೆ..:) ಚೆನ್ನಾಗಿದೆ..

    ReplyDelete