Thursday 22 November 2012

ಅವ್ಯಕ್ತ ಶಕ್ತಿ

ಕಪ್ಪು ಹಣದಲ್ಲಿ ಕಟ್ಟಿಹ ಮನೆಯಡಿ 
ಬಡವನ ಬೆವರಿನ ಹನಿಯಿದೆ 
ಅದಕೇ, ಮನೆ ನೆಲಕಚ್ಚದೆ ನಿಂತಿದೆ 

ಭ್ರಷ್ಟರಾಳುತಿಹ ದೇಶದ ಮಣ್ಣಲಿ 
ಯೋಧರ ನೆತ್ತರು ಬೆರೆತಿದೆ 
ಅದಕೇ, ದೇಶಕ್ಕಿನ್ನೂ ಬಲವಿದೆ 

ಕುಡುಕ ಗಂಡನ ಕಾಟದ ನಡುವೆಯೂ 
ಸತಿಯ ಛಲ ಮತ್ತು ಒಲವಿದೆ 
ಅದಕೇ, ಬಾಳಲಿ ಇನ್ನೂ ಕಸುವಿದೆ 

ಹೊಲಸು ತುಂಬಿರುವ ಆತ್ಮದ ಮಧ್ಯದಿ 
ದೇವನು ಇಟ್ಟಿಹ ಬೆಳಕಿದೆ 
ಅದಕೇ, ದೇಹದಲಿನ್ನೂ ಉಸಿರಿದೆ 

3 comments:

  1. ಭ್ರಷ್ಟರಾಳುತಿಹ ದೇಶದ ಮಣ್ಣಲಿ
    ಯೋಧರ ನೆತ್ತರು ಬೆರೆತಿದೆ
    ಅದಕೇ, ದೇಶಕ್ಕಿನ್ನೂ ಬಲವಿದೆ

    wonderful lines...

    good one Paresh...

    ReplyDelete
  2. ಸುಲಲಿತವಾದ ಭಾಷಾ ಬಳಕೆಯ ಜೊತೆಗೆ ಅಪರಿಮಿತವಾದ ಸಾಮಾಜಿಕ ಕಳಕಳಿ ಮತ್ತು ಒಂದು ಸಾತ್ವಿಕ ಸಿಟ್ಟಿನ ಅನಾವರಣ ಇಲ್ಲಿದೆ.

    ReplyDelete
  3. ಎಲ್ಲೆಲ್ಲಿ ಏನೇನಿವೆಯೋ ಮೇಲಿರುವವ ಬಲ್ಲ! ಎಲ್ಲವನೂ ನಿಭಾಯಿಸಬಲ್ಲ! ಅವನಿಗೆ ಗೊತ್ತು ಅವನು ವ್ಯಕ್ತ ಪಡಿಸುವ ಅವನ ಅವ್ಯಕ್ತ ಬುದ್ದಿ! ಆದರೆ ಎಲ್ಲವನೂ ನಿಲ್ಲಿಸುತ್ತಾನೆ ಎಲ್ಲಿ ಹೇಗೆ ಬೇಕೋ ಹಾಗೆ!

    ನನ್ನದೂ ಮೇಲಿನಂತೆ ವ್ಯಕ್ತ ಮನದ ಮಾತುಗಳು ಅವ್ಯಕ್ತಕೆ!

    ReplyDelete