Friday 14 October 2011

ಕಾಕಃ ಅಹ್ವಾಯತೆ ಕಾಕನ್ , ಯಾಚಕನ್ ತು ಯಾಚಕನ್


ಅದೊಂದು ನೀರಸವಾದ ರಜಾ ದಿನ. ನಾನು ನಮ್ಮ ಮನೆಯ ಬಾಲ್ಕನಿಯಲ್ಲಿ ಸುಮ್ಮನೆ ಕುಳಿತಿದ್ದೆ. ಯಾವುದೇ ಕೆಲಸವಿರಲಿಲ್ಲ. ಸುಮ್ಮನೆ ಸಮಯವನ್ನು ತಳ್ಳಲು ಏನು ಮಾಡಬೇಕೆಂದು ತಿಳಿಯುತ್ತಿರಲಿಲ್ಲ.
ಅಷ್ಟರಲ್ಲಿ ಅಷ್ಟೊಂದು ಆಕರ್ಷಿತವಲ್ಲದ ಒಂದು ಪಕ್ಷಿಯಿಂದ ಆಕರ್ಷಿತನಾದೆ. ಆ ಪಕ್ಷಿ ಕಾಗೆ. ಅದರ ಕೊಕ್ಕಿನಲ್ಲಿ ಒಂದು ಚಿಕ್ಕ ಮಾಂಸದ ತುಂಡಿತ್ತು. ಅದು ಹೇಗೆ ಯಾವಾಗ ತಿನ್ನುವುದೆಂದು ನೋಡಲು ಕಾತುರನಾಗಿದ್ದೆ.
ಐದು ನಿಮಿಷಗಳು ಕಳೆದವು. ಹತ್ತು ನಿಮಿಷಗಳು ಕಳೆದವು. ಆದರೆ ಅದನ್ನು ತಿನ್ನದೇ ತಾಳ್ಮೆಯಿಂದ ತನ್ನ ಬಂಧು ಬಳಗಕ್ಕಾಗಿ ಕೂಗುತ್ತಿತ್ತು. ಕೊನೆಗೆ ಎಲ್ಲರೂ ಬಂದ ಮೇಲೆ ಆ ಚಿಕ್ಕ ತುಂಡನ್ನು ಎಲ್ಲರೂ ಹಂಚಿಕೊಂಡು
ತಿಂದವು. ನನ್ನ ಬಾಯಲ್ಲಿ ಶಬ್ಧಗಳಿರಲಿಲ್ಲ. ಆದರೆ ಆ ಕಾಗೆಗಳಲ್ಲಿರುವ ಪ್ರೀತಿ, ವಿಶ್ವಾಸ, ನಿಸ್ವಾರ್ಥ ಮನೋಭಾವವನ್ನು ಮಾತ್ರ ಸಂಪೂರ್ಣ ಗ್ರಹಿಸಿದ್ದು ಮಾತ್ರ ಸತ್ಯ. ಆ ದಿನದ ವರೆಗೆ ನನ್ನ ಮನಸ್ಸಿನಲ್ಲಿ ಕಾಗೆ ಎಂಬುದು ಕಪ್ಪು ಬಣ್ಣದ, ಕರ್ಕಶವಾದ ಪಕ್ಷಿಯಾಗಿತ್ತು .ಆ ದಿನ ನನ್ನ ಆಲೋಚನೆ ಸಂಪೂರ್ಣವಾಗಿ ಬದಲಾಯಿತು. ಕಾಗೆ ಮನುಷ್ಯನಿಗೆ ಮಾನವೀಯತೆಯ ಸಾರವನ್ನು ತಿಳಿಸಲೋಸುಗ ದೇವರು ಸೃಷ್ಟಿಸಿರುವ ಒಂದು ಜೀವಿಯೇನೋ ಅನಿಸಿತು.

ಇದನ್ನೇ ಒಟ್ಟು ನೀಡಿ ಹೇಳುವಂತಹ, ಒಂದು ಶ್ಲೋಕವನ್ನು ಸದ್ಯದಲ್ಲಿ ಸಹೋದ್ಯೋಗಿಯೊಬ್ಬರ ಮೂಲಕ ಕೇಳಿದೆ. ಈಗ ಅದು ನನ್ನ ಪ್ರಿಯವಾದ ಶ್ಲೋಕವಾಗಿದೆ. ನಿಜಕ್ಕೂ ಈ ಶ್ಲೋಕ ವರ್ತಮಾನ, ಭವಿಷ್ಯಗಳಲ್ಲೂ ಅರ್ಥಪೂರ್ಣ.
||ಕಾಕಃ ಅಹ್ವಾಯತೆ ಕಾಕನ್ , ಯಾಚಕನ್ ತು ಯಾಚಕನ್ ||
||ಕಾಕಾ ಯಾಚಕೋರ್ ಮಧ್ಯೆ,ವರಂ ಕಾಕೌ ನಾ ತು ಯಾಚಕನ್ ||
ಅರ್ಥ: ಒಂದು ಕಾಗೆಗೆ ಏನಾದರೂ ಸಿಕ್ಕಿದರೆ, ಅದನ್ನು ಹಂಚಿ ತಿನ್ನಲು ತನ್ನ ಬಂಧು ಬಳಗವನ್ನೆಲ್ಲ ಕರೆಯುತ್ತದೆ. ಅದೇ ಒಬ್ಬ ಯಾಚಕನಿಗೆ(ಯಾಚಕ ಅಂದರೆ ಈ ಶ್ಲೋಕದಲ್ಲಿ, ನಮ್ಮಂಥ ಸಾಮಾನ್ಯ ಮನುಷ್ಯರು. ಆಸೆಯ ಪರಾಕಾಷ್ಥೆಯಲ್ಲಿರುವವರು. ಎಷ್ಟು ಇದ್ದರೂ ಮತ್ತೆ ಬೇಕೆನ್ನುವವರು) ಏನಾದರೂ ತಿನ್ನಲು ಸಿಕ್ಕಿದರೆ, ಅವನು ಅದನ್ನು ಬೇರೆಯವರಿಂದ ಮುಚ್ಚಿಡುತ್ತಾನೆ. ಕಾಗೆ ಮತ್ತು ಯಾಚಕರಲ್ಲಿ, ಕಾಗೆಯೇ ಶ್ರೇಷ್ಠ.



  

No comments:

Post a Comment