Monday, 21 November 2011

ನಾನು ನಾನಾಗುವ ಮುನ್ನ ......ನಾನು ನಾನಾಗುವ ಮುನ್ನ
ನಾನು ಏನಾಗಿದ್ದೆ
ದೂರದ ಕಾಡಿನ
ವೃಕ್ಷದ ತುದಿಯ ಗೂಡಿನಲ್ಲಿ
ಜೇನಾಗಿದ್ದೆನೋ?
ನಾಗವೇಣಿಯ ಜಡೆಯ
ತಳದಿ ಹೇನಾಗಿದ್ದೆನೋ?
ಹತ್ತು ಹಲವು ಪ್ರಶ್ನೆ
ಉತ್ತರವಿರದ ಪ್ರಶ್ನೆ
ನಾನು ಎಂಬುದು ಏನು?
ಯಾಕಿದೆ ಭೂಮಿ ಬಾನು?
ನಾನ್ಯಾಕೆ ನಾನು?
ನಾನಿಲ್ಲದಿರೆ ಏನು?
ಎಲ್ಲವೂ ನಿಗೂಢ...
"ನಾನು"-ಏನೂ ತಿಳಿಯದ ಮೂಢ.....No comments:

Post a Comment