Thursday 17 November 2011

ನಿನ್ನ ಕಣ್ಣಲ್ಲಿ ಒಬ್ಬ ಜಗ ನೋಡಲಿ....









ಅಗ್ನಿಯಾ ಬಾಯಲ್ಲಿ 

ಧಗ ಧಗನೆ ಉರಿಯುತಿದೆ 
ಕ್ಷಣ ಮಾತ್ರದಲಿ ಮನುಜ 
ದೇಹ ಬೂದಿ 
ಜೀವನದಿ ಏನಿಲ್ಲ 
ಮಾಡಿದ್ದು ಹೊರಲಿಲ್ಲ
ಬೆತ್ತಲೆಯೇ ಬಿಟ್ಟವನು
ಹೋದ ಭುವಿಯ 
ಹೀಗೆ ಹೋಗ್ವಾಗ ಸಹ
ತನ್ನ ದೇಹದ ಮೋಹ 
ಬಿಡಲಿಲ್ಲ ಮನುಜನಿಗೆ 
ಕೊಂಚ ಸಹಿತ 
ತನ್ನ ದೇಹದಿ ಒಂದು 
ಜೀವನವು ಹಸನಾಗೋ
ಆಶಯವೂ ಈತನಿಗೆ 
ಕೊಂಚವಿಲ್ಲ 
ಓ ಮನುಜ ಆ ಕುರುಡ 
ಕಣ್ಣಿರದೆ ನರಳುತಿಹ 
ಬೂದಿಯಾಗುತಿವೆ ಕಂಗಳಲ್ಲಿ 
ಒಬ್ಬನಾ ಜೀವನದಿ ಬೆಳಕಾಗೆ 
ನಿನ ನಯನ 
ಅದಕಿಂತ ಸಾರ್ಥಕತೆ ಬೇರೆ ಉಂಟೆ?
ಭುವಿ ಬಿಟ್ಟು ಹೋಗ್ವಾಗ 
ಕಣ್ ಕೊಟ್ಟು ಹೋಗ್ನೀನು 
ನಿನ್ನ ಬಾಳಿಗೆ ಒಂದು ಅರ್ಥ ಬಹುದು 
ನಿನ್ನ ಕಣ್ಣಲ್ಲಿ ಒಬ್ಬ ಜಗವನ್ನು
ನೋಡುತಿರೆ 
ನಿನ್ನ ಆತ್ಮಕ್ಕೆ ಸಂತ್ರಪ್ತಿ ಇಹುದು...





No comments:

Post a Comment