Thursday 17 November 2011

ಅನಾಥರಲ್ಲ ಇವರು,ದೇವರ ಮಕ್ಕಳು .....



ಇವರಿಗ್ಯಾರೂ ಇಲ್ಲ 
ಮನದ ಮುದ ಹಂಚಲು,
ದುಗುಡಗಳ ಹೇಳಲು, 
ಕಷ್ಟದಲಿ ಭಾಗಿಯಾಗಲು.
ಜನನ ಪ್ರಮಾಣ ಪತ್ರದಲಿಲ್ಲ 
ಅಪ್ಪ ಅಮ್ಮನ ಹೆಸರು 
ಗೊತ್ತಿಲ್ಲ ಕುಲಗೋತ್ರ 
ಮನೆ ಅಥವ ಊರು 
ಎದೆ ಹಾಲನುಣಿಸಲು
ಹೆತ್ತ ತಾಯಿಯು ಇಲ್ಲ 
ಕೈ ಹಿಡಿದು ನಡೆಸಲು 
ತೀರ್ಥ ರೂಪನು ಇಲ್ಲ 
ಇವರಿಗೇನೂ ಬೇಡ 
ದೊಡ್ಡ ಸಂಪತ್ತು 
ಹಂಚಿಕೊಳ್ಳಲು ಹೃದಯ 
ಪ್ರೀತಿ ಕಿಂಚಿತ್ತು 
ಪ್ರತಿಭೆ ಬುದ್ಧಿವಂತಿಕೆಗಿಲ್ಲ
ಇವರಲ್ಲಿ ಕೊರತೆ 
ಬೇಕಾದ್ದು ಇವರಿಗೆ 
ಭರವಸೆಯ ಒರತೆ 
ಓ ಗೆಳೆಯ ಇವರ ಕೈ
ಹಿಡಿಯೋಣ ಏಳು 
ಅನಾಥರಲ್ಲ ಇವರು
ದೇವರ ಮಕ್ಕಳು

No comments:

Post a Comment