Saturday 19 November 2011

ಸೌಂದರ್ಯ ಮನದಲಿಹುದು.. ದೇಹದಲಲ್ಲ...






ಚಿಗರೆಯಾ ಮರಿಯದೋ
ಪುಟಿಯುತ್ತ ಓಡುತಿದೆ
ಅದ ಹಿಡಿಯಲೆಂದು ನಾನು ಹೊರಟೆ
ನೋಡಲಾ ಸೌಂದರ್ಯ,
ನಾಜೂಕು ನಡಿಗೆಯನು
ಮನದಲೇನೋ ತುಮುಲ ಏನೋ ಕಾಣೆ


ಮನಸು ಹಿಡಿತದಲಿಹದೆ
ಅದ ಹಿಡಿಯಬೇಕೆನಿಸಿ
ಓಡುತಲಿ ಹೊರಟೆ ಹಿಂದೆ ನಾನು
ನನ್ನ ಸಂಗವು ಬೇಡ
ಎನ್ನುತಲಿ ಆ ಮೃಗವು
ಮಾಯವಾಯಿತು ಎರಡು ಕ್ಷಣಗಳಲ್ಲೇ


ಮಾಯಾಮೃಗವನ್ನು
ಹುಡುಕುತ್ತ ಹೊರಟಿರುವೆ
ಸಿಗದು ಅದು ಎಂದೂ ತಿಳಿದು ಕೂಡ
ಅಕ್ಕ ಪಕ್ಕದಲಿರುವ
ಸಾಮಾನ್ಯ ಜೀವಿಗಳ
ಕಿಂಚಿತ್ತು ದೃಷ್ಟಿಯಲಿ ನೋಡುತಿರುವೆ


ಸೌಂದರ್ಯ ಕ್ಷಣ ಮಾತ್ರ
ಅದ ನೋಡಿ ಹೋಗದಿರು
ನಿಜವಾದ ಸೌಂದರ್ಯ ಮನದಲಿಹುದು
ಹೃದಯ ಸೌಂದರ್ಯವನು
ಗ್ರಹಿಸ ಬಲ್ಲವನಿಂಗೆ
ಜೀವನದ ದೋಣಿಯಲಿ ತೃಪ್ತಿ ಇಹುದು..



2 comments:

  1. ಹೃದಯ ಸೌಂದರ್ಯ ಶ್ರೇಷ್ಠವಾಗಿದ್ದರೆ ಮುಖದ ಸೌಂದರ್ಯ ಕಾಂತಿಯುಕ್ತವಾಗುವುದು. ಮುಖದ ಸೌಂದರ್ಯ ಶ್ರೇಷ್ಠವಾಗಿದ್ದು, ಹೃದಯ ಸೌಂದರ್ಯ ಕಳೆಹೀನವಾಗಿದ್ದರೆ ಏನು ಪ್ರಯೋಜನ.ನೋಡುತ್ತಾ ಇರಬಹುದಷ್ಟೆ.ಅಂಗಡಿಯಲ್ಲಿ ಭಿಕರಿಗಿಟ್ಟ ವ್ಯಾಪಾರದ ಪುತ್ಥಳಿಯಾ ಹಾಗೆ. ನಿಮ್ಮ ಕವಿತೆ ಚೆನ್ನಾಗಿದೆ.

    ReplyDelete
  2. ಧನ್ಯವಾದ ರವಿ ಸರ್.. ನಿಮ್ಮ ಪ್ರೋತ್ಸಾಹ ಖಂಡಿತ ಮರೆಯಲಾರೆ..

    ReplyDelete