Friday 2 December 2011

ಓ ನನ್ನ ಕನ್ನಡತಿ................




ಕನ್ನಡಿಯ ಮುಂದೆನ್ನ ಕನ್ನಡತಿ ನಿಂತೊಡನೆ 
ಕನ್ನಡಿಯು ನಾಚಿ ನೀರಾಪುದೇನೋ!!!
ಓ ನನ್ನ ನಲ್ಲೆ ನೀ, ಸಿಹಿಯ ಕಬ್ಬಿನ ಜಲ್ಲೆ 
ನಿನ್ನ ಸೌಂದರ್ಯಕೆಲ್ಲೆ ಇರುವುದೇನು

ನಿನ್ನ ವೈಯಾರದಾ ನಡಿಗೆಯಂದವ ನೋಡಿ 
ನೀರು ಸಹ ಜಾರದುವು ಬೀಳಬಹುದು
ಕಣ್ಣೊಳಗೆ ಸಹ್ಯಾದ್ರಿ ಹಸುರದುವೆ ತುಂಬಿಹುದು 
ನವಿಲ ನರ್ತನವಲ್ಲಿ ಕಾಣಬಹುದು 

ಮಾತಲ್ಲಿ ಮೈಸೂರ ಮಲ್ಲಿಗೆಯ ಕಂಪಿಹುದು 
ಆಹ್ಲಾದ ಭಾವ ನಿನ್ನೊಲವಿನಲ್ಲಿ
ನಿನ್ನ ಹೃದಯದಲದುವೆ ಜೋಗದಾ ಸಿರಿ ಇಹುದು 
ಪ್ರೀತಿಯಾ ಧಾರೆ ಧುಮ್ಮಿಕ್ಕಿಸುತಲಿ 

ಹುಸಿ ಕೋಪದಲಿ ನೀನು ಹುಬ್ಳಿ ಮೆಣಸಿನಕಾಯಿ 
ಸರಸದಲಿ ಮಂಗಳೂರ ಕೊಬ್ರಿ ಮಿಠಾಯಿ 
ಪ್ರೀತಿ ಸಹನೆಯಲಿ ನೀನು ನಮ್ಮ ಕನ್ನಡ ತಾಯಿ 
ಬಾ ಇಲ್ಲಿ, ಕರೆಯುತಿಹ ನಿನ್ನ ಸಿಪಾಯಿ.............

2 comments:

  1. ಕನ್ನಡತಿಯ ಸೌಂದರ್ಯಕ್ಕೆ ಕನ್ನಡಿ ಹಿಡಿದಂತಿದೆ ನಿಮ್ಮ ಕನ್ನಡತಿಯ ಕವಿತೆ.

    ReplyDelete
  2. ಧನ್ಯವಾದ ಸರ್ :)

    ReplyDelete