Thursday 1 December 2011

ನಾನೊಬ್ಬ ಜೋಕರ್, ನಾನೊಬ್ಬ ಜೋಕರ್.....






ರಕ್ತದಾ ಕಣ ಕಣದಿ ನಗಿಸುವಾ ಬಲವಿಹುದು
ವಿಶ್ವವನೆ ನಗಿಸುತ್ತಾ ಇರಿಸುವಾ ಛಲವಿಹುದು 
ಎಲ್ಲ ಜನರಾ ಮೇಲೆ ಭ್ರಾತ್ರತ್ವದೊಲವಿಹುದು
ನಾನೊಬ್ಬ ಜೋಕರ್, ನಾನೊಬ್ಬ ಜೋಕರ್

ಜೀವನವನೆಲ್ಲ ನಗಿಸುತಲಿ ಕಳೆದೆ 
ಅನ್ಯರಾ ಖುಷಿಯಲ್ಲಿ ತೃಪ್ತಿಯನು ಕಂಡೆ 
ಬಡವ ಬಲ್ಲಿದರನ್ನು, ಹುಡುಗ ಹುಡುಗಿಯರನ್ನು
ಕುಂಟ ಕುರುಡರೆನ್ನದೆ ಎಲ್ಲರನು 
ನಗಿಸಿದೆ, ನಗುವಿಗೆಲ್ಲಿದೆ ಭಾಷೆ?
ನಾನೊಬ್ಬ ಜೋಕರ್, ನಾನೊಬ್ಬ ಜೋಕರ್

ಕಷ್ಟಗಳ ಸುರುಳಿಯಲಿ ಮನವು  ಒದ್ದಾಡುತಿರೆ
ಏನನ್ನೂ ಲೆಕ್ಕಿಸದೆ ನಾ ಮುಗುಳು ನಕ್ಕೆ 
ದುಃಖಗಳ ಗಂಟಿಕ್ಕಿ ಮನದ ಮೂಲೆಯಲಿಟ್ಟು
ನಗುಮೊಗವ ತೋರುತಲಿ ಜನರೆದುರು ಹೋದೆ 
ನಾನೊಬ್ಬ ಜೋಕರ್, ನಾನೊಬ್ಬ ಜೋಕರ್

ಜೀವನವನೆಲ್ಲವನು ಜನರಿಗೋಸ್ಕರ ಕಳೆದೆ 
ನನ್ನ ಜೀವನವನ್ನು ನಾ ಮರೆತು ನಡೆದೆ
ಜೀವನದ ಅಂತ್ಯದಲಿ ನಾನೊಬ್ಬ ಒಂಟಿ 
ಯಾರು ಇಲ್ಲದೆ ಇಲ್ಲಿ ನಡೆಯುತಿಹೆ ಕುಂಟಿ
ನಾನೊಬ್ಬ ಜೋಕರ್, ನಾನೊಬ್ಬ ಜೋಕರ್

ಅನ್ಯರಿಗೋಸ್ಕರ ಬದುಕಿದವ ನಾನು 
ಜೀವನದ ಅಂತ್ಯದಲಿ ಒಬ್ಬ ಏಕಾಂಗಿ 
ಯಾರಿಲ್ಲದಿದ್ದರೂ  ದೇವ ಜೊತೆ ಇರುವ 
ನನ್ನ ಕೈ ಹಿಡಿದಾತ ಆಸರೆಯ ಕೊಡುವ
ನಾನೊಬ್ಬ ಜೋಕರ್, ನಾನೊಬ್ಬ ಜೋಕರ್









No comments:

Post a Comment