ಜಾರಿ ಬಿದ್ದನು ಅವನು
ಸಕ್ಕರೆಯ ಡಬ್ಬಿಯಲಿ
ಎಲ್ಲೆಲ್ಲೂ ಸಕ್ಕರೆಯ
ಕಂಡು ಖುಷಿಯು
ಇಷ್ಟು ದಿನ ಸಕ್ಕರೆಯ
ಸಿಹಿ ನೋಡೋ ಆಸೆ ಇರೆ
ಸಕ್ಕರೆಯ ಗುಡ್ದೆಯಲೇ
ಬಿದ್ದಿರುವನು
ಸಿಹಿಯನ್ನು ಸವಿಯುತ್ತ
ಸ್ವರ್ಗ ಸುಖದಲ್ಲಿ ಇರೆ
ಕೊಂಚ ಸಮಯದಿ
ಹೊಟ್ಟೆ ಅಳ ಹತ್ತಿತು
ಬಾಯಂತು ಇನ್ನೆಂದೂ
ಸಿಹಿಯೇ ಬೇಡವೋ ಎಂದು
ಕಟ್ಟು ನಿಟ್ಟಿನಲ್ಲಿ
ಆಜ್ಞೆಯ ಮಾಡಿತು
ಮದುವೆ ಎಂಬುದು
ಅದುವೇ ಸಕ್ಕರೆಯ ಸಿಹಿಯಂತೆ
ಮುಕ್ಕಿದರೆ ಮಧುಮೇಹ
ಹುಡುಕಿ ಬಹುದು
ಬುದ್ಧಿವಂತಿಕೆಯಿಂದ
ಸವಿಯುವುದ ತಿಳಿದವನ
ಬಾಳು ಎಂದೆಂದೂ ಹಸನಾಗ್ವುದು...
No comments:
Post a Comment