Saturday 3 December 2011

ನ್ಯಾಯದೇವತೆಗೆ ಕಟ್ಟಿದರು ವಿಧವೆಯ ಪಟ್ಟ...





ಅಲ್ಲಿ ಕಣ್ಣಿಗೆ ಪಟ್ಟಿ ಕಟ್ಟಿ 
ಮೂಕಿಯಾಗಿ ನಿಂತಿಹಳು 
ನ್ಯಾಯದೇವತೆ 
ಅಲ್ಲೊಬ್ಬ ತೀರ್ಪುಗಾರ 
ಇನ್ನಿಬ್ಬರು ನ್ಯಾಯದೇವತೆಯ 
ಕೈ ಹಿಡಿದು ಎಳೆಯುತಿಹರು
ಎರಡೆಡೆಯಿಂದ
ಹತಾಶಳಾಗಿ ನಿಂತಿರುವಳೀಕೆ

ಸತ್ಯವ ಸುಳ್ಳು ಮಾಡುವ 
ಭರದಲ್ಲಿ ಒಬ್ಬ
ಸತ್ತು ಮಲಗಿರುವ ಸತ್ಯವನು
ಏಳಿಸುವವ ಇನ್ನೊಬ್ಬ 
ಹಾದರದ ಹಣ ಹೊಡೆಯುವ 
ಭರದಲಿ ಮಾಡ ಹೊರಟಿರುವರೇ
ಸತ್ಯದ ಸಮಾಧಿ ?

ನ್ಯಾಯದಾಲಯವಿದು
ಸತ್ಯವದು ಕೂಗುತಿರೆ 
ನಾಯಿ ಬೊಗಳಿಕೆಗೆ ಸಮ 
ಸುಳ್ಳಿಗದೋ ಸಿಂಗರಿಸಿ,
ಚಂದನದ ಲೇಪದೊಡೆ
ತಂದಿಹರು ಮಾಯಾಂಗನೆಯ ಮಾಡಿ 
ಗೆದ್ದಿತೋ ಸುಳ್ಳು ಮಾಯ ಜಾಲವ ಹಾಕಿ

ಕೊಂದಾಯಿತು ನ್ಯಾಯದರ್ಧಾಂಗಿಯನು
ಸುಳ್ಳ ಗುಲಾಮರ ಕೇಕೆ ಎಲ್ಲೆಲ್ಲೂ 
ಸತ್ಯ ಸೇರಿದೆ ಸ್ವರ್ಗ 
ನ್ಯಾಯದೇವತೆ ಇಲ್ಲಿ ವಿಧವೆ 
ತನ್ನ ಇನಿಯನು ಹೋದ ಬೇಗೆಯಲಿ 
ಕೊಲೆಗಡುಕರ ಮುಖ ನೋಡ ಹೇಸಿ 
ನಿಂತಿಹಳು ಕಣ್ಮುಚ್ಚಿ 
ಕರಿವಸ್ತ್ರವ ಕಟ್ಟಿ
ಎಂದು ಕಣ್ ತೆರೆವಳೋ?

5 comments:

  1. ನ್ಯಾಯದೇವತೆಯ ಬಟ್ಟೆ ಕಳಚಿದ ಆತ್ಮಸಾಕ್ಶಿಯ ಅತ್ಯಾಚಾರಿಗಳು ಕೋರ್ಟು- ಕಚೇರಿಯಲ್ಲಿ ಬೊಬ್ಬೆ ಹೊಡೆಯುತ್ತಾರೆ. ನಿಮ್ಮ ಮಾತು ಮಾರ್ಮಿಕವಾಗಿ ಹರಿದು ಬಂದಿದೆ.

    ReplyDelete
  2. ಧನ್ಯವಾದ ಸರ್ :)

    ReplyDelete
  3. ಅಚ್ಚುಕಟ್ಟಾದ ಪದಗಳ ಬಳಕೆ. ಸತ್ಯದ ಅದಃ ಪತನದ ನೆಲೆಯನ್ನು ವಿವಿಧ ಬಣ್ಣದಲ್ಲಿ ಎತ್ತಿ ಹಿಡಿದಿರುವ ಪ್ರಯತ್ನ ರಮಣೀಯವಾಗಿದೆ. ಸತ್ಯದ ಸಮಾಧಿಯ ಮೇಲೆ ನಲಿದು ಸಂಬ್ರಮಿಸುತ್ತಿರುವ ನಮ್ಮ ಹೇಡಿತನವು ಬಿಂಬಿಸಿದ್ದರೆ ಇನ್ನೂ ಮೆರುಗು ಸಿಗುತ್ತಿತ್ತು.

    ReplyDelete
  4. This comment has been removed by the author.

    ReplyDelete
  5. ಧನ್ಯವಾದ ಸರ್:) ನಿಮ್ಮ ಸಲಹೆ ಖಂಡಿತ ಅಮೂಲ್ಯ :)

    ReplyDelete