Friday 16 December 2011

ಜಲಿಯನ್ವಾಲಾಬಾಗನಲ್ಲಿ ಜೊಲ್ಲು ಸುರಿಸಿದ ನಾಯಿ




ಸ್ವಾತಂತ್ರ್ಯ ರಣಕಹಳೆ 
ರುದ್ರ ರೂಪವ ತಾಳಿ 
ಎಲ್ಲರಾ ಹೃದಯದಲಿ 
ಕ್ರಾಂತಿಗೀತ 
ದೇಶಭಕ್ತರು ಎದ್ದು 
ಆಗಿಹರು ರಣಹದ್ದು 
ಬಿಳಿಯರನು ಕಿತ್ತದುವೆ 
ತಿನ್ನಲೆಂದು 

ಜಲಿಯನ್ವಾಲಾ-
-ಬಾಗಿನಾ ಮಧ್ಯದಲಿ 
ಸ್ವಾತಂತ್ರ್ಯ ಅಗ್ನಿಯನು
ಉರಿಸುತಿಹರು 
ಪಕ್ಕದಾ ಬೀದಿಯಲಿ 
ಹಸಿದ ಶ್ವಾನವು ಒಂದು 
ಜೊಲ್ಲನ್ನು ಸುರಿಸುತ್ತ 
ನಿಂತಿರುವುದು 

ತನ್ನ ಹಸಿವಿನ ಅಗ್ನಿ
ತಂಪುಗೊಳಿಸಲು ಅದುವು
ರಕ್ತ ಮಾಂಸವ ತಿನಲು
ಕಾಯುತಿಹುದು 
ತನ್ನವರು, ಪರಕೀಯ 
ಎಂದೆನದೆ ಈ ಶ್ವಾನ 
ಎಲ್ಲರನು ಸೀಳುತ್ತ 
ತಿನ್ನುತಿಹುದು 

ಆ ನಾಯಿ ಮತ್ತೀಗ 
ಮರುಜನ್ಮ ಪಡೆದಿಹುದು 
ಭ್ರಷ್ಟ ಜನ ನಾಯಕನಾ 
ರೂಪ ತಳೆದು 
ದೇಶವನು ಕಿತ್ತವನು 
ತಿನ್ನುತ್ತ ತೇಗುತ್ತ
ಭೂರಿ ಭೋಜನವನ್ನು
ಮಾಡುತಿಹನು 

1 comment:

  1. ಒಳ್ಳೆಯ ವಿಡಂಬಾತ್ಮಕ ಕವನ. ಪ್ರತಿಮೆಗಳ ಬಳಕೆಯಲ್ಲಿ ಮತ್ತು ಪದಗಳನ್ನು ಈಟಿಯಂತೆ ಬಳಸುವುದರಲ್ಲಿ ನೀವು ಗೆದ್ದಿದ್ದೀರಿ.

    ಛಾಟಿ ಹೀಗೇ ಬೀಸುತ್ತಿರಿ ಗೆಳೆಯ!

    ನನ್ನ ಬ್ಲಾಗಿಗೂ ಬನ್ನಿರಿ.

    ReplyDelete