Monday 26 December 2011

ಕತ್ತೆಗೆ ತೊಡಿಸಿದರು ಗಾಂಧೀ ಟೋಪಿ





ಗುಂಪಿನಲ್ಲೊಂದು ಕತ್ತೆಯ ಹುಡುಕಿ 
ತೆಗೆದರು, ವರ್ಣಮಾಲೆಯ ಹುರುಳು 
ತಿಳಿಯದಿರೂ, ಹೂವ ಮಾಲೆಯ ಹಾಕಿ 
ಖಾದಿ ತೊಡಿಸಿದರು
ಇದು ದೇಶದ ಭಾವೀ ರಾಜಕಾರಣಿ 

"ಅ" ಕಾರವೆಂದರೆ ಅರುಚುವುದೊಂದೇ ಗೊತ್ತು 
ಇದರ ಮೇಲೆ ಹಾಕಿದರು ದೇಶದ ಭಾರ
ಎಲ್ಲಿ ಕೊಂಡೊಯ್ವುದಿದು ದೇಶವ 
ಧೋಬಿ ಘಾಟಿಗೋ? ಕತ್ತಲ ಕೋಟೆಗೋ?
ಕಸದ ತೊಟ್ಟಿಗೋ?

ಅಕ್ಕ ಪಕ್ಕದಲೆರಡು ನರಿಗಳು
ಕತ್ತೆಯ ಮೇಲೆ ದೇಶದ ಭಾರ ಹಾಕಿದವರು 
ಕಾಯುತಿಹವು ಹರಿದು ತಿನ್ನಲು 
ಅದರ ಬೆನ್ನ ಮೇಲಿಹ ದೇಶದಾಸ್ತಿಯ 
ಹಾಡು ಹಗಲಲೇ ಲೂಟಿಯು

ನರಿಗಳ ಹಾಡಿಗೆ, ಹುಚ್ಚೆದ್ದು ಕುಣಿಯುತಿದೆ ಕತ್ತೆ
ದೇಶದ ಜನರಿಗೆ ಸಿಗುತಿರುವುದು ಬರೀ ಲತ್ತೆ 
ಈ ದೇಶವು ಕತ್ತೆ ನರಿಗಳ ಸ್ವತ್ತೇ?
ದೇಶವ ನಡೆಸುತಿಹನೊಬ್ಬ ಪಾಪಿ 
ಕತ್ತೆಗೆ ತೊಡಿಸಿಹರು ಗಾಂಧೀ ಟೋಪಿ...











No comments:

Post a Comment