Monday 26 December 2011

ಕಡಲ ಜೋಳಿಗೆಯಲ್ಲಡಗಿದ ಪ್ರೀತಿ...



ಹಕ್ಕಿಯೊಂದು ರೆಕ್ಕೆ ಬಡಿಯುತ 
ಹುಡುಕ ಹೊರಟಿತು ಪ್ರೀತಿಯ 
ಕತ್ತಿ ಕಂಗಳು ಹುಡುಕುತಿಹವು
ಇರುಳಿನಲ್ಲಿನ ಜ್ಯೋತಿಯ 

ಕಡಲ ಜೋಳಿಗೆಯೊಳಗೆ ಬೆಚ್ಚಗೆ
ಪ್ರೀತಿಯದುವು ಅಡಗಿದೆ 
ಜೋಡಿ ಜೀವದ ಕಾಯುವಿಕೆಯಲಿ 
ಸ್ವಪ್ನ ಲೋಕದಿ ಮಲಗಿದೆ

ಹಕ್ಕಿಯದುವು ಜಾಡು ಹಿಡಿಯಿತು 
ಕಾಡು ಮೇಡನು ಅಲೆಯುತ 
ಕಡಲ ಮೇಲೆ ಹಾರು ಹಾರುತ 
ಪ್ರೀತಿ ಬಿಂಬವ ಹುಡುಕುತ 

ಪ್ರೇಮದಗ್ನಿಯು ಉರಿಯುತಿಹುದು 
ಉರಿಗೆ ಅದುವು ಸುಡುತಿರೆ 
ಆತುರಾತುರದಿಂದ ಅದುವು 
ಕಡಲ ಗರ್ಭದಿ ಜಾರಿತು 

ಉಸಿರುಗಟ್ಟಿತು, ಆಯ ತಪ್ಪಿತು 
ರೆಕ್ಕೆ ಹರಿದದು ಬಿದ್ದಿತು 
ಪ್ರೀತಿ ಕಾಣದೆ, ಸೋತು ಹೋಗದು 
ಕಡಲ ಒಡಲಲಿ ಸತ್ತಿತು 

ಪ್ರೀತಿಯದುವು ನಲ್ಲನ್ಹುಡುಕುತ
ಕಡಲ ತಟಕೆ ಬಂದಿತು 
ಇನಿಯನವನು ಕಾಯುತಿರಲು 
ಬಂದು ಬೆಚ್ಚಗೆ ತಬ್ಬಿತು 

ಪ್ರೀತಿಯದುವು ಚೆಂದ ಚಿಟ್ಟೆಯು
ಹೋಗದಿರು ನೀ ಹಿಡಿಯಲು
ಒಲವಿನಿಂದಲಿ ಮನವ ಗೆದ್ದರೆ
ಬಹುದು ಪ್ರೇಮವ ಹೀರಲು...










No comments:

Post a Comment