Tuesday 20 December 2011

ಕಾಲ ಪಾದದಡಿ ಅಡಗಿಸಿಟ್ಟ ಸತ್ಯ





ಒಂದು ದಿನ ನಾ ಊರ ದಾರೀಲಿ
ಸತ್ಯ ಹುಡುಕುತ ಹೊರಟೆನು
ಬರಡು ನೆಲವದು ನಡೆದು ನಡೆದು 
ಆಸೆ ಬಿಟ್ಟು ಕುಳಿತೆನು
ಮದುವೆ ಮಾಡಲು ಅಪ್ಪನವನು
ಹತ್ತು ಸುಳ್ಳನು ಹೇಳುವ 
ವೈದಿಕನವ ದುಡ್ಡ ಆಸೆಗೆ 
ಗ್ರಹವ ಪಲ್ಲಟ ಮಾಡುವ
ದಿನಸಿಯವನು ದನದ ಹಿಂಡಿಗೆ 
ಕಲ್ಲ ಗುಂಡನು ಬೆರೆಸುವ 
ಕಾಮಿಯವನು ಸತಿಗೆ ಹೇಳದೆ 
ಸೂಳೆ ಮನೆಗೆ ಓಡುವ
ನ್ಯಾಯವಾದಿಯು ನ್ಯಾಯವನ್ನು 
ದುಡ್ಡಿನಾಸೆಗೆ ಮಾರುವ 
ಜನರ ನಾಯಕ ಸೇವೆ ನೆಪದಲಿ
ದುಡ್ದನೆಲ್ಲ ಹೊಡೆಯುವ
ಸತ್ಯವನ್ನು ಅಡಗಿಸಿಟ್ಟರು 
ಕಾಲ ಪಾದದ ಅಡಿಯಲಿ
ಕಾಲ ಗೋರಿಸಿ ನಡೆಯುತಿಹರು 
ಅದನು ಮುಚ್ಚುವ ಭರದಲಿ
ಹೇಗೆ ನಡೆದರೂ ಒಂದು ದಿನವದು 
ಸತ್ಯ ಹೊರಗೆ ಬರುವುದು 
ಪಾದ-ಭೂಮಿಯ ನಡುವೆ ಅದುವೇ
ಪುಟ್ಟ ಅಂತರವಿರುವುದು 
ಸತ್ಯ ಕಟುವದು ಅದರೂ ಸಹ 
ಹೂವ ಕಂಪನು ಬೀರ್ವುದು
ಸುಳ್ಳು ಕ್ಷಣಿಕ ಖುಷಿಯ ನೀಡಿ
ಕೊನೆಗೆ ಕೊಳಕನು ನಾರ್ವುದು...

No comments:

Post a Comment