Thursday, 8 December 2011

ಸೃಷ್ಟಿ ಸಮತೋಲನ
ಹಾವದುವು ಕಾರುತಿರೆ ವಿಷವನು 
ಜೇನದುವು ಹೀರುತಿದೆ ರಸವನು 

ಮಗುವದುವು ಉದ್ಭವಿಪೆ ಗರ್ಭದಿಂ 
ಇಲಿ ಹೋಯ್ತು ಮಾರ್ಜಾಲದುದರದಿ

ರವಿ ಮುಳುಗೆ ಸಾಗರದ ಅಂಚಲಿ
ಶಶಿಯವನು ಇಣುಕುತಿಹ ಸಂಚಲಿ 

ಮೊಗ್ಗೊಂದು ಅರಳಿ ಕೊಡೆ ಹೂವನು
ಕರು ಕಿತ್ತು ತಿನ್ನುತಿದೆ ಮೇವನು 

ಸುಖ ದುಃಖ ಎರಡು ಇರೆ ಜೀವನ
ಹೀಗಿಹುದು ಸೃಷ್ಟಿ ಸಮತೋಲನ 

No comments:

Post a Comment