Friday 17 February 2012

ನಾನು ಮತ್ತು ನೀನು




ನಾನು ಮತ್ತು ನೀನು 
ಮನ ಸೇರೆ ಬಾಳು ಜೇನು 
ಇಲ್ಲದಿರೆ ದಟ್ಟ ಕಾರ್ಮುಗಿಲ ಬಾನು 
ಹಾಗಾದರೆ ಬಾಳಿಗರ್ಥವೇನು?

ಪ್ರೀತಿಯದು ಬಲೆ, ಹೆಣೆಯುವುದು ಕಲೆ 
ಭಾವಗಳು ನಯವಾಗಿ ಮಿಳಿತವಾಗಲು
ಪುಟಿದೆದ್ದು ಹಾರುವುದು ಒಲವಿನಾ ಸೆಲೆ 
ಇಲ್ಲದಿರೆ ಜಾಡಿಸೆದೆಗೊದೆಯುವುದು
ಅತೃಪ್ತಿಯಲೆ

ನಾಲ್ಕು ದಿನದ ಬಾಳು 
ಸಹಜ ಏಳು ಬೀಳು 
ಅವನೊಳಿದ್ದರೆ ಅವಳು 
ಭೀಮ ಬಲ ತೋಳು 
ಇಲ್ಲದಿರೆ ಪ್ರತಿ ನಿಮಿಷ 
ನರಕದಾ ಗೋಳು 

2 comments:

  1. ನಾನು ಮತ್ತು ನೀನು ಎನ್ನುವುದಕ್ಕಿಂತ ನನ್ನೊಳಗೆ ನೀನು ಎಂಬ ಸುಂದರ ಕಲ್ಪನೆಯ ಮಧುರ ಅಭಿವ್ಯಕ್ತಿಗೆ ಸರಳವಾಗಿ ಬಣ್ಣ ಬಳಿದಿರುವ ಪರಿ ತುಂಬಾ ಚೆನ್ನಾಗಿದೆ ಪರೇಶಣ್ಣ..:) ಪ್ರೀತಿ ಒಲಿದರೆ ಬಾಳು ಸುಂದರ ಮತ್ತು ಅದೇ ಪ್ರೀತಿ ಕೈಯೊಗೆದರೆ ಜೀವನವೇ ದುಸ್ತರ ಎಂಬ ಅಭಿವ್ಯಕ್ತಿ ಮನಮುಟ್ಟುವಂತದ್ದು.. ಚೆಂದದ ಪ್ರೇಮಕವಿತೆ, ಬೆಳಕಿಂಡಿಯಿಂದ ಹೊರಟಿದ್ದು ಆಶ್ಚರ್ಯವಾದರೂ ಮಧುರ ಅನುಭೂತಿಗಳನ್ನು ಮನಕ್ಕೆ ಉಣ ಬಡಿಸಿತು..:)))

    ReplyDelete
  2. ಬೆಳಕಿಂಡಿಯಿಂದ ಮತ್ತೊಂದು ಒಲುಮೆಯ ಮುತ್ತು. ಬಾಳ ಹಾದಿಗೆ ಹೊಂದಾಣಿಕೆಯ ಹಾಸು.

    ReplyDelete