Friday 9 March 2012

ಮೊದಲ ಉಡುಗೊರೆ




ಬಾನು ಮಿಂಚಲು ತಾಮ್ರ ವರ್ಣದಿ
ರವಿಯು ಅಂಚಲಿ ನಾಚಿ ನೋಡಲು 
ಸುತ್ತ ಮೆತ್ತನೆ ತಂಪು ಗಾಳಿಯು 
ಅತ್ತ ತರಗೆಲೆ ರಸ್ತೆ ಹಾಸಲು 
ಪಕ್ಕ ಗುಡಿಯಲಿ ದೈವ ಘೋಷವು
ಅತ್ತಲಿತ್ತಲು ಜನ ಸಮೂಹವು 
ನನ್ನ ಮುಂದೆ ಪ್ರೇಮ ದೇವತೆ 
ಲೋಕ ಮರೆತು ನಿಂತಿಹೆ 

ಬೀಸೋ ಗಾಳಿಯ ಲಯಕೆ ನಿನ್ನಯ 
ಕೇಶ ರಾಶಿಯ ಲಲಿತ ನೃತ್ಯವು 
ಕಣ್ಣ ನೋಟದ ಒಂದು ಕಿರಣವು 
ಎದೆಯ ದ್ವಾರವ ಸೀಳಿದೆ 
ನಿನ್ನ ನಾಚುವ ನಗುವ ಅಂದದಿ 
ಮಾತು ಹೊರಡದೆ ಸೋತಿಹೆ 

ಚಿತ್ತ ಕುಣಿಯಿತು, ನನ್ನ ರಾಣಿ ನೀ
ಪುಟ್ಟ ಉಡುಗೊರೆ ನೀಡಲು 
ಕಾರು ಬಂಗಲೆ, ಲಕ್ಷದೊಡವೆಯು
ಅದರ ಎದುರು ಶೂನ್ಯವು 
ಸುತ್ತ ಲೋಕವ ಮರೆತು ಮನ 
ಆ ಹೊತ್ತ ನೆನೆದು ಕುಣಿಯಲು 
ನಿನ್ನ ಪ್ರೀತಿಯ ಪುಟ್ಟ ಕಾಣಿಕೆ 
ಎದೆಗೆ ಆನಿಸಿ ಕೂತಿಹೆ.........

1 comment:

  1. ವಾಹ್ ಪರೇಶರೇ
    ಮನದ ಒಲುಮೆಯ ಭಾವ
    ಪ್ರೀತಿ ಕವನದ ಕಾಣಿಕೆ
    ತುಂಬಾ ಚೆನ್ನಾಗಿದೆ

    ReplyDelete