Sunday 18 March 2012

ಹೃದಯ ಶ್ರೀಮಂತ



ಅಲ್ಲಿ ನಾಯಿ
ಜೊಲ್ಲು ಸುರಿಸುತ 
ಹಲ್ಲು ತೋರಿಸಿ ನಿಂತಿಹುದು 
ಪೆಚ್ಚು ಮೋರೆಯ ಹಾಕಿ 
ಕರುಣೆಯಿಲ್ಲದೆ ಜನ
ಕಲ್ಲು ಹೊಡೆದಿಹರು

ಮುಂದೆ ನಡೆಯುತ 
ಅಲ್ಲಿ ರೇಶಿಮೆಯ ಕೂದಲಿನ
ಶ್ವೇತ ವರ್ಣದಿ ಹೊಳೆವ 
ಕೊಬ್ಬಿದಾ ಶ್ವಾನವದು 
ಪ್ರೀತಿಯಾ ಕೂಗದಕೆ 
ಮೃಷ್ಠಾನ್ನ ಭೋಜನವು   

ಸಿರಿವಂತನಿಗದುವೆ
ಉಡುಗೊರೆಯ ಸರಮಾಲೆ 
ಸಾಗರದಿ ಒಂದು ಹನಿ 
ನೀರನ್ನು ಸುರಿಯುವರು 
ಬಡ ಮನುಜ ನೀಡುವಾ 
ಪ್ರೀತಿಗೆಲ್ಲಿದೆ ಬೆಲೆಯು
ತಾತ್ಸಾರಗೈಯ್ಯುತಲಿ 
ತಲೆಯೆತ್ತಿ ಮೆರೆಯುವರು 

ಹಣವೆಲ್ಲಿ ಶಾಶ್ವತವು 
ಹುಟ್ಟು ಸಾವಿನ ನಡುವೆ 
ಸತ್ತ ಮೇಲೆಲ್ಲರೂ 
ಮಲಗುವುದು ಮಣ್ಣಿನಲಿ 
ಸುಖ ಶಾಂತಿಯಲಿ 
ಒಂದು ತುತ್ತು ಅನ್ನವ ತಿಂದು 
ಹೃದಯದೊಳ್ ಪ್ರೀತಿ ಸೆಲೆ 
ಹರಿಸುವುದೇ ಜೀವನವು 


No comments:

Post a Comment