ಮುಂಜಾವಿನ ಮಂಜಿನ ಹನಿ ಭುವಿಯ ಸ್ಪರ್ಷಿಸೆ
ಮಣ್ಣ ಕಂಪು ಘಮ್ಮೆನ್ನುತ ಮೂಗ ಸೋಕಿದೆ
ಮುದುಡಿದ್ದಾ ತಾವರೆಯದು ಮೈಯ್ಯ ಚಾಚುತಾ
ವೈಯ್ಯಾರದಿ ಗಾಳಿಯ ಜೊತೆ ನೃತ್ಯವಾಡಿದೆ
ದುಂಬಿ ಗಣವು ಮಧು ಹೀರುತ ಹಮ್ಮು ಬಿಮ್ಮಲಿ
ಅತ್ತ ಇತ್ತ ಉತ್ಸಾಹದ ಚಿಲುಮೆ ಚೆಲ್ಲಿದೆ
ಮರದ ಮೇಲೆ ಪುಟ್ಟ ಪಕ್ಷಿ ಕಣ್ಣು ಪಿಳುಕಿಸಿ
ಮರದ ಮೇಲೆ ಪುಟ್ಟ ಪಕ್ಷಿ ಕಣ್ಣು ಪಿಳುಕಿಸಿ
ಸಂಗಾತಿಯ ನೋಡುತ್ತಾ ಮೈಯ್ಯ ಮರೆತಿದೆ
ಬಾನ ಮೂಲೆಯಿಂದ ರವಿಯ ಹೊನ್ನ ಕಿರಣಕೆ
ಗುಡಿಯ ಶಿಖರ ಕಳಶ ಶುಭ್ರ ಕಾಂತಿ ಚಿಮ್ಮಿದೆ
ಸುಪ್ರಭಾತ ಗಾನದೊಡನೆ ಧೂಪದಾರತಿ
ಶಂಖ ವಾದ್ಯ, ಗಂಟೆಯಾ ನಿನಾದ ಮೊಳಗಿದೆ
ಭಾನುತೇಜ ವೀರನಾ ಶೌರ್ಯ ದೃಷ್ಟಿಗೆ
ದುಷ್ಟ ಶಕ್ತಿ ಅಂಜಿಕೆಯಲಿ ಅಡಗಿ ಕೂತಿದೆ
ಎಲ್ಲೆಡೆಯೂ ಸ್ವಚ್ಛ ಶುಭ್ರ ಬೆಳಕಿನೋಕುಳಿ
ಜನ ಗಣವದು ಹೊಸ ಪಯಣಕೆ ಹೆಜ್ಜೆ ಹಾಕಿದೆ
ಮುಂಜಾವಿನ ಮಧುರವಾಗಿ ಹಾಡಿಕೊಳ್ಳಬಲ್ಲ ಗೀತೆ. ಲಯ ಭಾವ ಮತ್ತು ಮನೋಜ್ಞ ಚಿತ್ರಣದ ಸಂಗಮ.
ReplyDelete