Friday 6 July 2012

ಬಾಳ ಬಂಡಿ







ಜನುಮ ತಳೆದಾಗ ನಾ ವಿಶ್ವಮಾನವನಿದ್ದೆ 
ಬೆಳೆಯುತ್ತ ಹಾಕಿದೆನು ಸುತ್ತ ಗಡಿಯ 
ಬಿಸಿರಕ್ತದಮಲಿನಲಿ, ನಾನೆಂಬ ಅಹಮಿನಲಿ 
ಎಂದುಕೊಂಡೆನು ಜಗಕೆ ನಾನೇ ಒಡೆಯ

ತುಕ್ಕು ಹಿಡಿದಿದೆ ಮನವು, ಒಣ ಜಂಭ ಸೊಕ್ಕಿನಲಿ
ಸುಕ್ಕುಗಟ್ಟಿದೆ ತನುವು ಕಾಲದೊಡನೆ
ಬಿಕ್ಕುತಿಹೆ ಬದುಕಿನಾ ಬವಣೆ ಮಧ್ಯದಲಿಂದು
ಪುಣ್ಯ ಠೇವಣಿ ಮಾಡ ಮರೆತೆ ಅಂದು

ಕಾಲದಾ ಹಾದಿಯಲಿ, ಬದುಕ ಬಂಡಿಯ ಮೇಲೆ
ನಮ್ಮಯಾ ಪಯಣವದು ಸಾಗುತಿಹುದು
ಬಂಡಿ ಚಾಲಕನವನೆಣಿಸಿದಂತೆಮ್ಮ ಕರೆಯೊಯ್ವ
ಪುಣ್ಯದೆರೆಯಿಂ ಪಯಣ ಹಸನಾಗ್ವುದು

3 comments:

  1. ಹೀಗೆ ಘಮವಿರಲಿ ಪರೇಶ್ ಈ ಪಯಣದುದ್ದಕ್ಕೂ. ಚಕ್ರ ತಿರುಗುತ್ತಲೇ ಇರಬೇಕು ಕಲ್ಲು ಮುಳ್ಳುಗಳ ತುಳಿದುಕೊಂಡು, ಆ ನೋವನನುಭವಿಸಿಕೊಂಡು! ಅಹಂ ಎಂಬ ಚರಂಡಿಯೊಳಗೆ ಬಂಡಿ ಬೀಳದಿದ್ದರೆ ಬಾಳ ಬಂಡಿ ಸರಾಗ!
    ಪ್ರಸ್ತುತಿ ಉತ್ತಮ.

    ReplyDelete
  2. ಖುಷಿಯಾಯಿತು, ಒಂದು ಚರಣ ಒಂದು ಉತ್ತಮ ಕವನಕ್ಕೆ ನೊಗವಾಗಬಲ್ಲದು ಎನ್ನುವುದು ತೋರಿಸಿಕೊಟ್ಟಿರಿ. ಒಳ್ಳೆಯದು.

    ReplyDelete
  3. ಖುಷಿಯಾಯಿತು, ಒಂದು ಚರಣ ಒಂದು ಉತ್ತಮ ಕವನಕ್ಕೆ ನೊಗವಾಗಬಲ್ಲದು ಎನ್ನುವುದು ತೋರಿಸಿಕೊಟ್ಟಿರಿ. ಒಳ್ಳೆಯದು.

    ReplyDelete