Wednesday 25 July 2012

ವಿಶ್ವರೂಪಿ




ದೇವಮ್ಮಗೆ ಹೊನ್ನಿನಾ ಕಿರೀಟ ತೊಡಿಸಿಹ
ಶ್ರೀಮಂತಿಕೆ ಅಬ್ಬರವನು ಅಲ್ಲಿ ಮೆರೆದಿಹ
ಊರ ಗಣ್ಯರೆಲ್ಲ  ಸೇರಿ ಹಾರ ಹಾಕಲು 
ತಾನೇ ದೊಡ್ಡ ಮನುಜನೆಂದು ಉಬ್ಬಿ ಹಾರಿಹ  

ಅಮ್ಮಳೇನು ಮುತ್ತು ರತ್ನ ಚಿನ್ನ ಕೇಳ್ವಳೇ?
ಜಗವೆಲ್ಲಾ ಅವಳದಿರಲು ಆಸೆ ಪಡುವಳೇ?
ಕೆರೆಯ ನೀರನದುವೆ ಮತ್ತೆ ಕೆರೆಗೆ ಚೆಲ್ಲಿರೆ 
ಆತನೇನು ಮಹಾನ್ ದಾನಶೂರನಾಗ್ವನೇ?

ತಬ್ಬಲಿಗಳು, ಅನ್ನವಿರದೆ ಕೊರಗುತಿರುವರು 
ಹೆಬ್ಬುಲಿಗಳು ಹಣದ ಮದದಿ ಮೆರೆಯುತಿರುವರು
ಅನ್ನವಿತ್ತ ದೇವನಿಗೆ ನೈವೇದ್ಯವಿಕ್ಕುತ
ಅನ್ನವಿರದ ಬಡವರನ್ನು ಸಾಯಗೊಡುವೆವು

ದೇವನವನು ವಿಶ್ವರೂಪಿ ಗುಡಿಯ ಮೀರಿಹ 
ಸಹೃದಯದ ಸೇವೆಯಲ್ಲಿ ಅವನು ಕಾಣುವ 
ಅಹಂ ಎಂಬ ರಾಕ್ಷಸನನು ದಮನ ಮಾಡುತ 
ಧರ್ಮವನ್ನು ಎಂದೆಂದೂ ಎತ್ತಿ ನಡೆಸುವ 





2 comments:

  1. ಪೊಳ್ಳು ದೇವ ಭಕ್ತಿ ಪ್ರದರ್ಶನದಿಂದ ಹೊಟ್ಟೆ ತುಂಬೀತೇ ಎಂದು ಉತ್ತಮವಾಗಿ ಪ್ರಶ್ನಿಸಿದ್ದೀರ ಗೆಳೆಯ.

    ReplyDelete
  2. ವಿಶ್ವರೂಪಿ ಪರಮಾತ್ಮನ ಸಾಕ್ಷಾತ್ಕಾರದ ಅನುಭೂತಿ ನೀಡಿದ ಕವಿತೆ.. ದೇವ ಕೊಟ್ಟದ್ದನ್ನೇ ಕೂಡಿಟ್ಟು ಅವನಿಗೇ ಕಿರೀಟ ತೊಡಿಸಿ ಮೆರೆವ ಮಾನವನ ಬೂಟಾಟಿಕೆಯನ್ನು ಬಯಲಿಗೆಳೆವ ಪ್ರಯತ್ನ ಮಾಡಿದ್ದೀರಿ.. ಸಮಾಜಮುಖಿಯಾದ ಬೆಳಕಿಂಡ ಕೆಡುಕರ ಕಿವಿ ಹಿಂಡಿ ಸಹೃದಯರಿಗೆ ಸಾಹಿತ್ಯ ಧಾರೆ ಹರಿಸಲಿ.. ಚೆಂದದ ಕವಿತೆ..

    ReplyDelete