Friday 14 December 2012

ಎಂಟು ಹನಿಗಳು


ಮೂರ್ತಿಯ 
ಮೇಲೆರೆದ ಹಾಲು 
ಕೊಚ್ಚೆ ಸೇರಿತ್ತು 
ಅದ ನೋಡಿ 
ಕರು ಕಣ್ಣೀರು ಹಾಕಿತ್ತು 

******

ಮಕ್ಕಳಿಗೋಸ್ಕರ 
ಉಪವಾಸ ಮಾಡಿದಳು.
ಈಗ ಮಕ್ಕಳು 
ಉಪವಾಸಗೆಡವಿದ್ದಾರೆ 

*********

ರೈಲು ನಿಲ್ದಾಣದಿ 
ಶ್ರೀಮಂತನಿಗೆ 
ಹತ್ತಾರು ಹೂವಿನ ಮಾಲೆ, 
ಅಲ್ಲಿದ್ದ ನಿರ್ಗತಿಕರಿಗೆ 
ಅದರ ಸುಗಂಧವೇ ಊಟ

*********

ಪೈಸೆ ಪೈಸೆ ಕೂಡಿಟ್ಟ 
ಅನುಭವಿಸಿ ಸಜ
ಈಗದರಿಂದ ಯಾರೋ 
ಮಾಡುತಿಹರು ಮಜ

************

ಆ ಹುಲಿ 
ಕಾಡೆಮ್ಮೆಯ  
ಹೊಸಕಿ ಹಾಕಿತ್ತು,
ಕಿವಿಗೆ ಚಿಕ್ಕ ನೊಣ 
ಹೊಕ್ಕಾಗ ಅಸಹಾಯಕ!

*************

ವೇದ, ಉಪನಿಷತ್ 
ಅಧ್ಯಯನ ಮಾಡಿ 
ಅವನು  ಸಾರಿದ್ದು 
ಅಧರ್ಮ 

**************

ಕೋಟಿ ಇರುವವ 
ಊಟ ಮಾಡದಿದ್ದರೆ 
ಡಯಟ್ 
ಬಡವ ಮಾಡದಿದ್ದರೆ 
ಉಪವಾಸ 

***************

ಅವನದು 
ರತ್ನಗಂಬಳಿ ಹೊದ್ದ 
ಚಿನ್ನದ ಮಂಚ 
ಆದರೆ ನಿದ್ದೆಯ 
ಸುಳಿವಿಲ್ಲ 






3 comments:

  1. ದೈನಂದಿನ ಸಂಗತಿಗಳು, ಯೋಚನೆಗಳು ಹನಿಯಾಗಿ ಮಿತ್ರ ಪರೇಶರ ಕವಿಮನದ ಬೆಳಕಿಂಡಿಯ ಮುಖೇನ ಬೆಳಕು ಕಾಣುತ್ತಿವೆ. ಈ ಬೆಳಕು ಎಲ್ಲೆಡೆ ಪಸರಿಸಲಿ.

    ReplyDelete
  2. ಪರೇಶ್,
    ಕಣ್ಣಿಗೆ ಕಂಡಿದ್ದನ್ನು ಚುಟುಕುಗಳಾಗಿ ಬರೆಯುವ ನಿಮ್ಮ ಪರಿಗೆ ಶರಣೂ.... ಎಲ್ಲಾ ಚೆನ್ನಾಗಿವೆ...

    ReplyDelete
  3. ಯಾವುದಕ್ಕೆ ಮಾರ್ಕ್ಸ್ ಹಾಕಲಿ ಯಾವುದನ್ನು ಬಿಡಲಿ ಅಕಟಕಟಾ...

    ReplyDelete