Monday 18 March 2013

ಅಮ್ಮನ ಕೈ ತುತ್ತು

ಮೈ ಸುಡುವ ಜ್ವರವಿತ್ತು,
ಹೋಟೆಲಲಿ ತಿಂದೆ 
ಎರಡು ಒಣ ಇಡ್ಲಿ 
ಮೂವತ್ತು ರೂಪಾಯಿ ಕೊಟ್ಟು;
ಆಗ ನೆನಪಾಗಿದ್ದು 
ಬೈದು ಬೈದು ತಿನ್ನುತ್ತಿದ್ದ 
ಅಮ್ಮನ ಕೈ ಉಪ್ಪಿಟ್ಟು!

No comments:

Post a Comment