Tuesday 1 November 2011

ಭಗ್ನ ಪ್ರೇಮಿ ಹೇಳಿದ್ದು.................


ಮನ ಪುಳಕಿಸಿತು ಅಂದು,
ಹೋಗುತ್ತಿದ್ದೆ ನಾನು ಬಾಳಿನ ರಸ್ತೆಯಲಿ,
ನನ್ನ ಹಿಂದೆ ಆ ಕನಸುಗಳ ದಂಡು
ಅಷ್ಟರಲಿ ನಿಂತೆ ನಾ ಅವಳನ್ನು ಕಂಡು

ಗೊತ್ತಿಲ್ಲ ಏನೆಂದು ಈ ಪ್ರೀತಿ ಪ್ರೇಮ
ಮನಸಾಗ ಬಲು ತಾಜ,ಮುಗ್ಧತೆಯ ಧಾಮ
ಮನಸಲ್ಲಿ ಬಿತ್ತಿದಳು ಪ್ರೀತಿಯಾ ಬೀಜ
ಅವಳು ಜೊತೆಗಿದ್ದಾಗ ಆಗಿದ್ದೆ ರಾಜ

ಬಲು ಹಿತವು ಆಗಿತ್ತು ಅವಳ ಅನುರಾಗ
ದಿನಗಳುರುಳುತ್ತಿತ್ತು ಬಲು ಬೇಗ ಬೇಗ
ಆಕೆ ಜೊತೆಗಿದ್ದಾಗ ಇದ್ದಂತೆ ಪ್ರಪಂಚ
ಸಾಕಿತ್ತು ಅವಳ ಅನುರಾಗ ಕೊಂಚ

ಆದಳಾಕೆ ಜೀವನದ ಅವಿಭಾಜ್ಯ ಅಂಗ
ಮನವಾಗಿತ್ತು ಸೀಮೆಯಿಲ್ಲದ ಸಾರಂಗ
ಅವಳ ನುಡಿ, ಕಷ್ಟಗಳನೆದುರಿಸುವ ತಾಕತ್ತು
ಅವಳಾದಳು ಜೀವನದ ದೊಡ್ಡ ಸಂಪತ್ತು

ಅಷ್ಟರಲಿ ಬೀಸಿತೊಂದು ದೊಡ್ಡ ಬಿರುಗಾಳಿ
ಅವಳು ಹೋದಳು, ಮತ್ತೆ ಬರಳೆಂದು ಹೇಳಿ
ನನಗೆ ಸಿಗುವಳಂತೆ ತುಂಬಾ ಒಳ್ಳೆಯ ಹುಡುಗಿ
ಏನುಪಯೋಗ, ಈಕೆ ಸಿಗುವುದಿಲ್ಲ ತಿರುಗಿ

ಅವಳಿಲ್ಲದೆ ನಾನು ಆದೆ ಒಬ್ಬಂಟಿ
ನಡೆಯಲಾಗದೆ, ಬಿದ್ದು ನಡೆಯುತಿಹೆ ಕುಂಟಿ 
ಕಷ್ಟಗಳ ಎದುರಿಸುವ ಶಕ್ತಿಯೀಗ ಸೊನ್ನೆ
ಕಾಯುತಿಹೆ ಮರಳಿ ಬರಲೆಂದು ಮೊನ್ನೆ 

ಈಗಿಲ್ಲ ಅವಳ ಪ್ರೀತಿ,ಅನುರಾಗ,ಒಲುಮೆ
ಮನಸಲ್ಲಿ ಇನಿತಿಲ್ಲ ಸಂತಸದ ಚಿಲುಮೆ
ಅನಿಸಿತು ಇಷ್ಟೇ ಏನು ಈ ಪ್ರೇಮ ಪ್ರೀತಿ
ಮನ ಹೇಳಿತು, ಇದೇ ಈ ಜಗ ನಡೆವ ರೀತಿ

No comments:

Post a Comment