Thursday 10 November 2011

ಸತ್ಯದ ಹೆಣದ ಮೇಲೆ ಸುಳ್ಳಿನ ಕೋಟೆ.....

ತೇಲಿ ಬರುತಿಹುದಲ್ಲಿ ಸತ್ಯದಾ ಕಳೇಬರ 
ಕಾಯುತಿವೆ ಶ್ವಾನಗಳು ಕಿತ್ತು ತಿನಲು 
ಕೊಂದಿರುವ ಪ್ರಾಣಿಗಳು ಮೂಸದೆ ಬಿಟ್ಟಿಹವು
ತಮ್ಮ ಸುಳ್ಳನು ಸತ್ಯ ಮಾಡಿಕೊಂಡು

ಸತ್ಯದಾ ಹೆಣವಿಹುದು ಸುಳ್ಳ ಕೋಟೆಯ ಕೆಳಗೆ
ಕೋಟೆಯನು ಆಳುವವ ಧೂರ್ತನೊಳಗೆ
ಸತ್ಯಾಸ್ತಮಾನವು ಆಯಿತೆಂಬ ಧೈರ್ಯದಲಿ
ಸುಳ್ಳ ಬಲೆಯನು ಹೆಣೆದಿರುವ ಹೊರಗೆ

ಮಾಡುತಿರುವನು ಇವನು ಸತ್ಯದಾ ತಿಥಿಯೂಟ
ತಾನು ಗೆದ್ದೆನೆಂಬ ಖುಶಿಯ ಭರದಿ
ತನಗೇನು ಭಯವಿಲ್ಲ, ಸತ್ಯ ಮರಣಿಸಿದೆಯೆನಲು
ಸತ್ಯವೆಂದಿತನ್ನಾತ್ಮ ಇಲ್ಲೇ ಇಹುದು

3 comments:

  1. ಇದೇನಿದು ಈ ಕವಿತೆಯಲ್ಲಿ ಭೂಗತ ಲೋಕದ ಚಿತ್ರಣ ಮೂಡಿಸಿದ್ದೀರಾ.. ಕಥೆ ಚೆನ್ನಾಗಿದೆ.. :)

    ReplyDelete
  2. ನಿಮ್ಮ ಬರವಣಿಗೆಯಲ್ಲಿ ಕೆಲವು ಪಕ್ವವಾದ ಬದಲಾವಣೆ ಕಾಣುತ್ತಿದ್ದೇನೆ. ಉತ್ತಮ ಪ್ರಯತ್ನ ಪರೇಶಣ್ಣ.

    ReplyDelete
  3. ಚಿಂತನೆಗಚ್ಚುವ ಕವಿತೆ ಪರೇಶಣ್ಣ.. ಶೀರ್ಷಿಕೆ ನನಗೆ ತುಂಬಾ ಹಿಡಿಸಿತು.. ನಿಮ್ಮ ಕಾವ್ಯದ ಸೊಗಡಿನಲ್ಲಿನ ಸಮಾಜಮುಖಿ ಸ್ಪರ್ಶಗಳನ್ನು ಉಳಿಸಿಕೊಂಡು ಸತ್ಯದನಾವರಣಕ್ಕೆ ಅಣಿ ಮಾಡುತ್ತದೆ ಕವಿತೆಯ ಒಡಲು.. ಸತ್ಯವನ್ನು ಸುಟ್ಟು ಸುಳ್ಳಿನ ಕೋಟೆ ಕಟ್ಟಿದರೂ, ಸತ್ಯ ಸಮಾಧಿಯಾಗುವುದಿಲ್ಲ ಅದಕ್ಕೆ ಒಂದು ಜೀವದ ಉಸಿರ ಸ್ಪರ್ಶ ಸೋಕಿದರೂ ಸಾಕು ಮೇಲೆದ್ದು ಬರುತ್ತದೆ ಸಮಾಧಿಯಿಂದೆದ್ದಂತೆ.. ಹಿಡಿಸಿತು ನಿಮ್ಮ ಯೋಚನಾಲಹರಿಯ ಕವಿತೆ..:)

    ReplyDelete