Sunday, 13 November 2011

ಜೋಪಾನ ಓ ಗೆಳತಿ, ಪ್ರೀತಿ ಇರಲಿ...................


ನವಿಲು ಗರಿಯಾ ಮೇಲೆ ಪನ್ನೀರ ಚಿತ್ತಾರ
ನಲ್ಲೆ ನಿನ ಕಂಗಳಲಿ ಕಂಡೆ ನಾನು
ಪ್ರಿಯತಮೆಯೇ ನಿನ್ನಯಾ ಕಣ್ಣಲ್ಲಿ ಕಣ್ಣಿಟ್ಟು
ಗಂಟೆಗಟ್ಟಲೆ ನಾನು ನಿಲ್ಲಲೇನು

ನೀ ನಡೆವ ದಾರಿಯಲಿ ಮಲ್ಲಿಗೆಯ ಕಂಪಿಹುದು
ಮುತ್ತು ಉದುರುವುದು ನಿನ ಮಾತಿನಲ್ಲಿ
ನಿನ್ನ ಸ್ಪರ್ಷದಲದುವೆ ಒಲವಿನಾ ಸೆಲೆಯಿಹುದು
ಅಮೃತವು ನಿನ್ನ ಕೈ ತುತ್ತಿನಲ್ಲಿ

ಬದುಕು ಬೃಂದಾವನದಲ್ಲಿ ಅಪರಿಮಿತ ಹೂವುಗಳು
ನನ್ನೆಡೆಗೆ ಬಾಗಿ, ನೀ ಬಂದೆ ಚೆಲುವೆ
ನನ್ನೆದೆಯ ಹಾಳೆಯಲಿ ಪ್ರೇಮಗೀತೆಯ ಬರೆದು
ಒಲವ ಕಾರಂಜಿಯನು ಚಿಮ್ಮಿಸಿರುವೆ

ನನ್ನ ಜೀವನ ಜಯವ ನಿನ್ನ ಖುಷಿಯಲಿ ಕಂಡೆ
ನೋವನೆಲ್ಲವ ಮರೆತೆ ನಿನ ಮಡಿಲಲಿ
ನನ್ನ ಹೃದಯವ ನಿನ್ನ ಕೈಯಲ್ಲೇ ಕೊಟ್ಟಿರುವೆ
ಜೋಪಾನ ಓ ಗೆಳತಿ, ಪ್ರೀತಿ ಇರಲಿ...................

No comments:

Post a Comment