Monday 14 November 2011

ಇರುವುದೊಂದೇ ಜಾತಿ , ಅದುವೇ ಮಾನವ ಜಾತಿ...


ಮದುವೆಯಾ ಸಮಯದಲಿ
ಕುಲಗೋತ್ರ ನೋಡುವರು,
ಪ್ರೀತಿಸಿಹೆ ತಾನೆನಲು
ಎಗರಿ ಬಹರು
ಜಾತಿಯದು ತಮದಲ್ಲ
ತಮಗೆ ಹೊಂದುವುದಿಲ್ಲ
ತನ್ನ ಜಾತಿಯವರೇ ಬೇಕೆನುವರು
ಸಾಯುವಾ ಸಮಯದಲಿ
ರಕ್ತ ಬೇಕೆನುವಾಗ
ಜಾತಿಯಾ ನೋಡಿವರು
ಮುನ್ನಡೆವರೇ?
ತನ್ನ ಕುಲ ಗೋತ್ರದಾ ರಕ್ತವೇ ಬೇಕೆಂದು
ಜಾತಕವ ಹೊಂದಿಸಿಯೇ
ನೆತ್ತರ  ಪಡೆವರೇ?
ಆಗಿರದ ಈ ಜಾತಿ ಮದುವೆಯಲಿ ಯಾಕಿನ್ನು
ಈ ಥರದ ಮೂಢತೆಯು ಎಷ್ಟು ದಿನವು
ಇರುವುದೊಂದೇ ಜಾತಿ ಅದುವೇ ಮಾನವ ಜಾತಿ
ದೇವನೇ, "ಅರುಹಿದನು ಜಗದ ಜನಕೆ "

No comments:

Post a Comment