ನಿನ್ನ ಮುಡಿಯಲ್ಲೊಂದು ಹೂವಾಗುವಾಸೆ
ಅಷ್ಟು ಅರ್ಹತೆಯೂ ಇಲ್ಲವೇನು
ಹೂವ ಕಂಪದು ಓಡಿ ನಿನ್ನ ನಾಸಿಕ ದಾಟೆ
ಆ ನಿನ್ನ ತ್ರಪ್ತಿಯಲಿ ಧನ್ಯ ನಾನು
ನಿನ್ನ ತಟ್ಟೆಯಾ ಅನ್ನವಾಗುವಾಸೆ
ದಯವಿಟ್ಟು ಪ್ರೀತಿಯಲಿ ತಿನ್ನು ಎನನು
ಅನ್ನನಾಳದ ಒಳಗೆ ಅನ್ನವದು ಚಲಿಸುತಿರೆ
ನಿನ್ನ ಹೃದಯವ ಮುಟ್ಟಿ ಹೋಗ ಬಹೆನು
ನೀನೋದುವ ಹೊತ್ತಿಗೆಯಾಗುವಾಸೆ
ಏಕಾಗ್ರ ಚಿತ್ತದಿ ಓದು ಎನನು
ನೀನು ಓದಿದುದೆಲ್ಲ ಮನನವದು ಆಗುತಿರೆ
ನಿನ್ನೊಳಗೆ ನಾನಾದೆ ಜ್ಞಾನ ಜೇನು
ಗೂನಾಗಿ ನಡೆಯುತಿಹೆ ನಿನ್ನ ಆಸರೆ ಇಹದೆ
ಹಗಲೆಲ್ಲ ಇರುಳಾಗಿ ಕಾಣುತಿಹುದು
ನಿಜವಾದ ಹೃದಯವನು ನಿನ ಕೈಗೆ ಕೊಟ್ಟಿರುವೆ
ಇಲ್ಲಿ ನೆತ್ತರ ದೂಡೋ ಯಂತ್ರವಿಹುದು...........
ಸಾಧನೆಗೋಸ್ಕರ ಸಮರ್ಪಣೆ. ಎಲ್ಲವನೂ ನಿನಗೊಪ್ಪಿಸುವ ಭಾವ. ತವಕ ಗುರಿ ಮುಟ್ಟುವ ತನಕ, ಪರೇಶ್ ಈ ಅರ್ಹತೆಗೆ ಎಲ್ಲರೂ ಶ್ರಮಿಸಬೇಕು.
ReplyDeleteಚೆನ್ನಾಗಿದೆ ಪ್ರಸ್ತುತಿ.