Tuesday 22 November 2011

ಆಗು ನೀ ಸಂಬಂಧ ಬೆಸೆಯುವಾ ದರ್ಜಿ.....







ನಾನೊಬ್ಬ ದರ್ಜಿ,
ಹೊಲಿಯುವೆನು ಅಂಗಿ.
ಹರಿದ ಬಟ್ಟೆಯ ನಾನು,
ಜೋಡಿಸುವೆ ತಂಗಿ.
ಕೊಂಚ ಹರಿದಾಗಲೇ 
ತಾ ಇಲ್ಲಿ ಅರಿವೆ,
ಅಲ್ಲೆ ಕಿರು ಹೊಲಿಗೆಯನು 
ಹಾಕಿ ನಾ ಕೊಡುವೆ.
ಚಿಕ್ಕದಾ ತೂತೆಂದು 
ಕಡೆಗಣಿಸಬೇಡ,
ತೂತದುವೆ ಬಟ್ಟೆಯನು
ಹರಿಯುವುದು ನೋಡ.
ಸಂಬಂಧಗಳಲು ಸಹ
ಈ ಮಾತು ದಿಟವು,
ಬಲು ಸೂಕ್ಷ್ಮವಾಗಿಹುದು 
ಮನಸಿನಾ  ಪುಟವು.
ಮನಸ್ತಾಪಗಳದುವೆ 
ಮನುಜನಲಿ ಸಹಜ,
ಶುರುವಿನಲೆ ಕೊಂದು ಬಿಡು
ದ್ವೇಷದಾ ಬೀಜ,
ಬೀಜ ಹೆಮ್ಮರವಾಗಿ 
ಬೆಳೆದು ಬಿಡೆ ಅದುವು 
ಎಂದಿಗೂ ಚಿಗುರಿಪುದು,
ಬೆಂಕಿಯಾ ಹೂವು.
ಬಾಳಿದೋ ಎರಡು ದಿನ
ಪರಶಿವನ  ಮರ್ಜಿ ,
ಆಗು ನೀ ಸಂಬಂಧ 
ಬೆಸೆಯುವಾ ದರ್ಜಿ.....



1 comment:

  1. ಪರೇಶ್, ಜೀವನದ ಸಂಬಂಧಗಳ ಬಗ್ಗೆ ಎಷ್ಟು ಸೂಕ್ಷ್ಮವಾಗಿ, ಚೆನ್ನಾಗಿ ಹೇಳಿದ್ದಿರಿ....ಮನ ಮುಟ್ಟುವ ಕವನ. ನಿಮ್ಮಿಂದ ಮತ್ತಿಷ್ಟು ಕಲಾಸೇವೆ ನಡೆಯಲಿ ಎಂಬುದು ಈ ಶೀಲಕ್ಕಳ ಹಾರೈಕೆ!

    ReplyDelete