Tuesday 29 November 2011

ಮರ ಗಿಡಕು ಕೊಂಚವದೋ ಕೊಡು ನೀ ಜಾಗ..........



ಕೂದಲದು ಉದುರುತಿರೆ 
ವಿಧ ವಿಧದ ತೈಲವನು
ನೆತ್ತಿಯಾ ಮೇಲೆರೆದು
ಸರಿ ಪಡಿಸುವೆ 
ಕೇಶವದು ಇಲ್ಲದಿರೆ 
ಅಂದ ಕೆಡುವುದು ಎಂದು 
ಏನೇನೊ ಮಾಡಿ 
ಕೇಶವ ತರಿಸುವೆ 
ಓ ಮನುಜ ಅದೋ ನೋಡು
ಮರ ಉರುಳಿ ಬೀಳುತಿದೆ 
ಕಣ್ಣನ್ನು ಮುಚ್ಚಿ ನೀ ಕುಳಿತಿರುವೆಯ?
ಗಾಯಕ್ಕೆ ಬರೆಯಂತೆ ಮತ್ತೆ
ಮರವನು ಕಡಿದು 
ಭೂಮಿಯಾ ಕ್ಷೌರವನು
ಮಾಡಲಿಹೆಯ?
ಓ ಸ್ವಾರ್ಥಿ ನಿನ ಮೇಲೆ 
ಎನಿತು ಒಲವದೋ ನಿನಗೆ 
ನಿನ್ ಹೊತ್ತ ಭೂಮ್ತಾಯಿ 
ಮೇಲಿಲ್ಲವೇ?
ಅವಳಲ್ಲಿ ಬೋಳಾಗಿ 
ಮರುಗುತ್ತ ನಿಂತಿರಲು
ನೋಡುತ್ತ ಕುಳಿತಿರುವೆ,
ನಾಚಿಕೆಯಿಲ್ಲವೇ?
ನೀ ಕುಳಿತ ಗೆಲ್ಲನ್ನು 
ನೀನೆ ಕೆಡಹುತಲಿರುವೆ 
ನಿನ್ನ ಅಳಿವಾಗಲಿದೆ ಬಹಳ ಬೇಗ 
ಎಲ್ಲವನು ಅರಿತು ಸಹ 
ಮೂಢ ನೀನಾಗದಿರು 
ಮರ ಗಿಡಕು ಕೊಂಚವದೋ 
ಕೊಡು ನೀ ಜಾಗ..........




No comments:

Post a Comment