Thursday 24 November 2011

ಸಿಂಹದ ಮರಿ: ಭಗತ್ ಸಿಂಗ್............






ತಾಯಿ ಮೊಲೆ ಹಾಲಲ್ಲಿ ದೇಶಭಕ್ತಿಯ 
ರಸವ ಕಲಸದನು ಈ ಮಗಗೆ 
ಕುಡಿಸಿರುವಳೇನು
ನೆತ್ತರಾ ಹನಿ ಹನಿಯು ಸ್ವಾತಂತ್ರ್ಯ 
ಮಂತ್ರವನು ಅನವರತ 
ಜಪಿಸುತ್ತ ಇರುವ ಪರಿಯೇನು
ಜೈಲ ಕಂಬಿಯ ಹಿಂದೆ 
ಬಿಳಿಯ ವಸ್ತ್ರವ ಧರಿಸಿ 
ರಣ ಜಾಲವನ್ನಾತ ಹೆಣೆಯುತಿರಲು
ಕೆಂಪು ಮೂತಿಯ ಆಂಗ್ಲ 
ದುಷ್ಟ ನಾಯಕರೆಲ್ಲ 
ಈತನ ಹೆಸರಲ್ಲಿ ನಡುಗುತಿಹರು.
ಸ್ವಾತಂತ್ರ ಜ್ಯೋತಿಯಾ ಬೆಳಗುವಾ
ಕನವರಿಕೆ
ಮನೆ ಮಠವ ಬಿಟ್ಟವನು ಬಂದ ಹೊರಗೆ 
ಜೀವನದ ಸುಖವನ್ನು 
ಗಂಟು ಕಟ್ಟೆಸೆದಿವನು
ತಾಯ ಸೇವೆಯ ಮಾಡಿ 
ಬಂದ ಸೆರೆಮನೆಗೆ 
ಆಂಗ್ಲರದೋ ಹೆದರಿದರು 
ಇವನ ಶೌರ್ಯವ ನೋಡಿ 
ಇವನಿರೆ ನಮಗಿಲ್ಲಿ 
ಉಳಿವು ಇಲ್ಲ 
ತಲೆಯ ತೆಗೆಯುವರೆನಲು 
ತಲೆ ಕೊಟ್ಟು ನಿಂತನಿವ 
ಇವನ ಗುಂಡಿಗೆಯಲ್ಲಿ 
ಅಳುಕು ಇಲ್ಲ
ತಾಯಿ ಭಾರತಿಯನು ತಲೆ ಎತ್ತಿ 
ನಿಲ್ಲಿಸಲು 
ತನ್ನ ಶಿರವನು ಕೊಡಲು ಸಿದ್ಧನಾದ 
ಕೊನೆ ಉಸಿರು ಇರುವರೆಗೂ 
ತಾಯ ಮಂತ್ರವ ಜಪಿಸಿ 
ಪ್ರಾಣ ತ್ಯಾಗವ ಮಾಡಿ ಬುದ್ಧನಾದ 
ತಾಯಿ ಭಾರತಿ ಅಲ್ಲಿ 
ತಲೆ ಎತ್ತಿ ಗರ್ವದಿ 
ಆನಂದ ಭಾಷ್ಪವನು 
ಹರಿಸುತಿಹಳು 
ಇಂತಹಾ ಮಗನೊಬ್ಬ 
ನನ್ನ ಕರುಳಾ ಬಳ್ಳಿ 
ಎಂದು ಜಗಕೆಲ್ಲ 
ಸಾರುತಿಹಳು................

No comments:

Post a Comment