Wednesday, 30 November 2011

ಮೋಸದ ಜಾಲ............

.


ಆ ಕೋಣೆ ಮೂಲೆಯಲಿ, ಬಾಗಿಲಿನ ಕೀಲ ಬಳಿ 
ಜೇಡವದು ಬಲೆಯನ್ನು ಹೆಣೆಯುತಿಹುದು
ಬಲೆಯ ವ್ಯೂಹದ ಒಳಗೆ ಕಳೆದು ಹೋಗುತಲದುವು
ತಿಳಿಯದೆಯೇ ಒಳ ಒಳಗೆ ಹೋಗುತಿಹುದು 
ತಾ ಹೆಣೆದ ಜಾಲವದು ಎಷ್ಟು ಚೆಂದವು ಎಂದು 
ಮುಸಿ ಮುಸಿ ಎನ್ನುತಲಿ  ನಗುತಲಿಹುದು 
ಅಷ್ಟರಲೇ ತಾ ಹೆಣೆದ ಬಲೆಯ ನಡುವೆಯೆ ಸಿಲುಕಿ 
ದಾರಿಯೂ ಕಾಣ್ದೆ ಅದು ಹುಡುಕುತಿಹುದು
ಓ ಗೆಳೆಯ ಮೋಸದಾ ಬಲೆಯನ್ನು ಹೆಣೆಯುತಿಹೆ
ಯಾರನ್ನೊ ಅದರೊಳಗೆ ಕೆಡಹಲೆಂದು
ನಿನ್ನ ಖೆಡ್ಡವ  ನೀನೆ ತೋಡುತಿರುವೆಯೆಂದು 
ಮೂಢ ನಿನಗದುವು ತಿಳಿಯದಿಂದು
ಪ್ರೀತಿಯಾ ಮನೆಯನ್ನು ಕಟ್ಟು ನೀ ಓ ಮನುಜ 
ನೂರಾರು ಜನ ನಿನ್ನ ಬಳಿ ಇರುವರು 
ಸ್ವಾರ್ಥ ಜಾಲವ ಕಟ್ಟಿ, ರಾಜ್ಯ ಭಾರವ ಮಾಡೆ
ಬದುಕಿಸಲಾರ ನಿನಗೆ ಆ ದೇವರೂ......!!!





No comments:

Post a Comment