Monday 5 December 2011

ಕುರುಡು ಪ್ರೀತಿ.......






ನನ್ನ ನೋಡುವ ಮುಂಚೆ 
ಭುವಿಯ ಸ್ಪರ್ಶಿಸೋ ಮೊದಲೇ 
ನನ್ನ ನೀ ಪ್ರೀತಿಸಿದೆ ಮೇರೆ ಮೀರಿ 
ಜಾಡ್ಹಿಡಿದು ಹೊರಟೆ ನಾ
ಆ ಪ್ರೀತಿ ದಾರಿಯಲಿ
ಮೊದಲಿಲ್ಲ ಕೊನೆಯಿಲ್ಲ 
ಅದು ಅನಂತ 
ಪ್ರತಿಫಲದ ಹಂಗಿಲ್ಲ
ಸ್ವಾರ್ಥವದು ಇನಿತಿಲ್ಲ 
ನನ್ನಲ್ಲೇ ನಿನ್ನನ್ನು ಕಂಡೆ ನೀನು
ಜಾರುತಿಹ ನನ್ನನ್ನು 
ಆಧರಿಸಿ ನಿಲ್ಲಿಸುತ 
ಮಾನವನ ಮಾಡಿದಾ
ದೇವಿ ನೀನು 
ಹುಟ್ಟುತ್ತಾ ನಾನೊಬ್ಬ 
ಬರಿಯ ಮಣ್ಣಿನ ಮುದ್ದೆ
ರೂಪವನು ನೀಡದಕೆ
ಸಿಂಗರಿಸಿದೆ 
ನಿನ್ನ ಪ್ರೀತಿಯ ಎದುರು 
ಉಳಿದೆಲ್ಲವದು ಶೂನ್ಯ 
ಇದಕೆ ಎಂದಿರುವರೆ ಪ್ರೀತಿ ಕುರುಡು?

No comments:

Post a Comment