Sunday 11 December 2011

ನಲ್ಲೆಯೊಂದಿಗೆ ಕಡಲ ತಟದಲಿ...


ನಲ್ಲೆಯವಳು ಮೆಲು ದನಿಯಲಿ 
ಪ್ರೀತಿ ರಸವನು ಜಿನುಗುತ
ಕಡಲ ತಟದಲಿ ಬಳಿಗೆ ಕುಳಿತಿರೆ
ಮಿನುಗು ನಗೆಯನು ಚೆಲ್ಲುತ

ನುಣುಪು ಶಿಲೆಯ ಬಂಡೆ ತಾಕಿದ 
ಕಿರಣ ಪಥವನು ಬದಲಿಸಿ 
ಅವಳ ಅಂದವ ನೋಡಿ ಸೋತು 
ಹೋಗುತಿಹನು ಚುಂಬಿಸಿ

ಅವಳ ನೋಡಲು ಪೋಲಿ ತೆರೆಗಳು 
ಓಡಿ ಓಡವು  ಬರುತಿರೆ
ಹೊಟ್ಟೆ ಕಿಚ್ಚಲಿ ಗಟ್ಟಿ ಹಿಡಿದೆನು
ಅಂಗಲಾಚುತ ಅಕ್ಕರೆ

ಮೇಘಸುಂದರ ಬಾನ ಪಥದಲಿ 
ಮೆಲ್ಲ ಮೆಲ್ಲಗೆ ಬರುತಿಹ
ದಾರಿ ಮಧ್ಯದಿ  ಅವಳ ನೋಡಿ
ಕೈಯ್ಯ ಬೀಸಿ ಕರೆದಿಹ

ಇವಳ ಚೆಂದವ ನೋಡಿ ನಾಚಿ 
ಬಾನು ಕೆಂಪಲಿ ಮಿಂಚಿದ
ರವಿಯು ಚೆಲುವೆಯ ಕಣ್ಣ ನೋಡುತ
ಕಡಲ ನೀರೊಳು ಜಾರಿದ...

1 comment:

  1. ಇವಳ ಚೆಂದವ ನೋಡಿ ನಾಚಿ
    ಬಾನು ಕೆಂಪಲಿ ಮಿಂಚಿದ
    ರವಿಯು ಚೆಲುವೆಯ ಕಣ್ಣ ನೋಡುತ
    ಕಡಲ ತಟದಲಿ ಜಾರಿದ...!
    : ಈ ಸಾಲು ತುಂಬಾ ಚೆನ್ನಾಗಿದೆ ಪರೇಶಣ್ಣ. ಕಡಲ ತೀರ ಕಾವ್ಯ ಪ್ರತಿಮೆಗಳಲ್ಲಿ ಸದಾ ಬಡಿಯುವ ಅಲೆ.ಅಷ್ಟೇ ಸುಂದರವೂ ಕೂಡ.

    ReplyDelete