Thursday 29 December 2011

ಮತ್ತೆ ಬಾ ಮಳೆ ಹನಿಯೇ




ದಿನ ಮುಂಜಾವಲಿ ಮಿಂದರೂ 
ಮಳೆಯಲಿ ನೆಂದ ಅನುಭವಕೆಲ್ಲಿ ಸಾಟಿ 
ಅದೂ ನೀರೇ , ಇದೂ ನೀರೇ
ಮನದಾಳದಲ್ಲಿ ಮೂಡುವ ಭಾವನೆಗಳು 
ಮಾತ್ರ ಬೇರೆ ಬೇರೆ 

ಆ ನೀರ ಹನಿಯ ಮುತ್ತು 
ಮುಖದ ಮೇಲೆ ಬಿದ್ದು
ಎದೆಯ ಬಾಗಿಲ ಬಳಿ ಎದ್ದು 
ಮಾಡಿತೊಂದು ಸುಮಧುರ ಸದ್ದು 
ಸತ್ತು ಹೋದ ಪ್ರೀತಿಯ ನೆನಪು 
ಜೀವ ತುಂಬಿ ಹಾರಿತು ಪುಟಿದೆದ್ದು

ಆ ನೀರ ಹನಿ ನಡೆದ ದಾರಿಯಲಿ
ನೀರೆಯ ನೆನಪಿಹುದು 
ಪ್ರೀತಿಯಲಿ ಜಾರಿದ ಕುರುಹಿವುದು 
ಒಲವ ಕೋರಿದ ಪರಿ ಇಹುದು 
ಅವಳನುರಾಗದ ಝರಿ ಇಹುದು 

ಅನಿಸುತಿದೆಯೆನಗೆ ಅಂದು ಬಿದ್ದ 
ನೀರ ಹನಿಯೇನೋ ಅದು 
ನಲ್ಲೆಯ ಜೊತೆ ನಲ್ಮೆಯಲಿ 
ಜಿನುಗು ಮಳೆಯಲಿ ಕುಳಿತಿರುವಾಗ.
ಆವಿಯಾಗಿ ಬೀಳುತಿದೆ 
ಪ್ರತಿ ಸಂವತ್ಸರದಲಿ 

ಕಾಯುವೆನದಕೆ ಪ್ರತಿ ವರುಷ 
ಮತ್ತೆ ಬಾ ಮಳೆ ಹನಿಯೇ.....................

1 comment:

  1. ಭಾವಸ್ಪುರಣ! ಸುಂದರ ಅನುಭೂತಿ.
    ***
    ಪ್ರತಿದಿನ ಬೆಳಿಗ್ಗೆ ಮಿಂದರೂ
    ಮಳೆಯಲ್ಲಿ ನೆಂದ ಅನುಭವಕೆಲ್ಲಿ ಸಾಟಿ ----> ಇಲ್ಲಿ "ಪ್ರತಿದಿನ ಬೆಳಿಗ್ಗೆ" ಎನ್ನುವಾಗ ಗದ್ಯ ಭಾವ ಮೂಡುತ್ತದೆ. ಅದಕ್ಕೆ "ದಿನ ಮುಂಜಾವಲಿ ಮಿಂದರೂ" ಎಂದರೆ?

    *ಅನಿಸುತೆದೆಯೆನಗೆ=ಅನಿಸುತಿದೆಯೆನಗೆ?

    ReplyDelete