Monday 2 January 2012

ಶಾಲು ಹೊದಿಸಿ ಸನ್ಮಾನ




ಊರ ಕಟ್ಟೆಯ ಪಂಚಾಯತಿಯಲಿ 
ದೊಡ್ಡದೊಂದು ಸಮಾರಂಭವು
ಜನ ನೆರೆದಿಹರು ಕಿಕ್ಕಿರಿದು 
ಎಲ್ಲೆಲ್ಲೂ ಕೇಕೆಯು
ಅಲ್ಲಲ್ಲಿ ಸಾರಾಯಿ ಖೊಟ್ಟೆಗಳು 
ಬಂದಿಹರಲ್ಲಿ ಜನ ನೂರು ಸಾವಿರ
ಪುಡಿಗಾಸಿನ ಮೋಹದಲಿ 

ಕೆರೆಯ ನೀರಿನ ಒಂದು ಲೋಟವನು
ಚೆಲ್ಲುತಿಹರವರು ಕೆರೆಗೆ 
ಅವರದೇನು ಹೋಗುವುದು ಗಂಟು 
ಜನ ಮರುಳಾಗಿ ಕೈ ಚಾಚುತಿಹರು 
ಕಾಂಚಾಣದ ಮೋಹದಲಿ 
ಹೇಳುವನವನು ಗೆಲ್ಲಿಸಿ ನನ್ನನ್ನು 
ದೇಶವ ಮಾಡುವೆ ನಾಕ 
ಜನ ತಟ್ಟುತಿರುವರು ಚಪ್ಪಾಳೆಯ 
ತಿಳಿದೂ ಸಹ, -"ಅವನ ಮಾತಿನಲಿಲ್ಲ ತೂಕ"

ದುರ್ಯೋಧನ, ದುಷ್ಯಾಸನರು ಬಂದಿಹರು
ರಾಮ ಲಕ್ಷ್ಮಣರ ಮುಖವಾಡ ತೊಟ್ಟು 
ಹಾಡ ಹಗಲಲೇ ಊರ ಲೂಟಿ ಮಾಡಿದವರು 
ತೊಟ್ಟಿಹರು ದೇಶ ರಕ್ಷಣೆಯ ಶಪಥವ 
ಊರ ಅಮಾಯಕರ ಬಟ್ಟೆಯ ನೂಲೆಳೆದು 
ಮಾಡಿದ ಶಾಲು ಹೊದಿಸಿ ಇವರಿಗೆ ಸನ್ಮಾನ...

No comments:

Post a Comment