Monday, 11 June 2012

ನಿರಂತರ

ಸಂಜೆ ಮಳೆಯ 
ಹನಿಯೊಂದು ಎನ್ನ 
ಕಣ್ಣ ಹನಿಯೊಡೆ ಸೇರಿ 
ಮಣ್ಣಿಗೆ ಜಾರಿ 
ಹರಿದು ಸಾಗರವ ಸೇರಿ 
ಆವಿಯಾಗಿ 
ಮರು ಸಂವತ್ಸರದಿ
ಮತ್ತೆ ಮಳೆಯಾಗಿ 
ಅವಳ ಹಣೆಯನಪ್ಪಳಿಸಿ
ಜಾರಿ ಹೃದಯವ ತೋಯ್ದು
ಆಕೆಯ
ಗೂಡಿನಲಡಗಿದ
ನೆನಪುಗಳು ಹಸಿಯಾಗೆ
ಎನ್ನ ಕಣ್ಣು ಮತ್ತೊಂದು ಹನಿ
ನೆಲಕುರುಳಿಸಿತ್ತು
 

No comments:

Post a Comment