Friday 31 August 2012

ಲೀನ



ನಲ್ಲೆ ನಿನ್ನ ಕಂಗಳಲ್ಲಿ ಇಹುದು ಎನ್ನ ಕನಸು 
ಅದಕೇ ನಿನ್ನ ನೋಡಲೆಂದು ಹಾತೊರೆವುದು ಮನಸು 
ದೇಹ ನನದು, ಭಾವ ನಿನದು ನನ್ನಾಸರೆ ನೀನು 
ಎದೆಯ ಬರಿದು ಗೂಡಿನಲ್ಲಿ ಇಟ್ಟೆ ಪ್ರೀತಿ ಜೇನು 

ತಪ್ಪ ಮರೆತು, ಒಪ್ಪಿ, ಅರಿತು ಮುಂದೆ ನೀನು ನಡೆವೆ 
ಅನುಕ್ಷಣವೂ  ನನ್ನ ಸನಿಹವಿರಲು ಆಸೆ ಪಡುವೆ 
ನನ್ನ ಕವಿತೆ ಪದಗಳಲ್ಲಿ ನೀ ತುಂಬಿದೆ ಜೀವ 
ನಗುವನ್ನೇ ಕೊಡುವೆಯಲ್ಲ ತಿಂದು ಕೂಡ ನೋವ 

ಬದುಕ ವಿಧಿಯ ಆಟದಲ್ಲಿ ನಿಂತು ಹೋಗೆ ಉಸಿರು
ಮತ್ತೆ ಜೀವ ಕೊಟ್ಟೆ ಸಖಿಯೆ  ಮಾಡಿ ಬಾಳ ಹಸಿರು 
ನನ್ನ  ರಾಗ ನಿನ್ನ  ಶೃತಿಯು ಬಾಳು ಒಂದು ಗಾನ 
ನಿನ್ನ  ಒಲವ  ಧಾರೆಯಲ್ಲಿ  ಆದೆ ನಾನು ಲೀನ 

4 comments:

  1. ಯಾವುದೋ ರಾಗ ಕರೆದು ನೆನಪಿಸಿದಂತಿದೆ ಭಾವ ಲಯಬದ್ದ ಸಾಲುಗಳು. ಹಾಗೆಯೇ ಕನಸುಗಳ ಹಪಾಹಪಿ ಚೆನ್ನಾಗಿದೆ. ಇದು ನಿಮ್ಮ ಮೊದಲ ಲಯಬದ್ದ ಕವಿತೆ ಅಂತ ಓದುತ್ತಿದ್ದೇನೆ. ಉತ್ತಮ ಭಾವಸಿಂಚನವಿದೆ ಇಲ್ಲಿ.

    ReplyDelete
  2. ನಲ್ಲೆಯಿಲ್ಲದಿದ್ದರೂ ಒಂದು ಕ್ಷಣ ಲೀನವಾದೆ ಕಲ್ಪನಾಲೋಕದ ನಲ್ಲೆಯೊಡನೆ ಪರೇಶ್! ಒಂದೊಳ್ಳೆಯ ಭಾವಭರಿತ ಝರಿ

    ReplyDelete
  3. ಹಾಲೊಳಗೆ ಜೇನು ಲೀನವಾದಂತೆ ತೋರಿತು ನಿಮ್ಮ ಮೃದು ಮಧುರ ಪ್ರೇಮ ಕಾವ್ಯ ’ಲೀನ’.. ನಲ್ಲೆಯೊಡನೆ ಸಮುದ್ರ ದಂಡೆಯ ತೀರದಲ್ಲೊಂದು ಸುತ್ತು ಬಂದು ಅವಳ ತೋಳುಗಳಲ್ಲಿ, ನನ್ನ ತೋಳುಗಳ ಸೇರಿಸಿ ಅವಳ ಹಣೆಗೊಂದು ಮುತ್ತಿರಿಸಿ ನಾನೂ ಅವಳ ಪ್ರೀತಿಯಲ್ಲಿ ಆಗಬೇಕು ಲೀನ ಎಂಬ ಉತ್ಕಟ ಆಸೆಯನ್ನು ಬಿತ್ತಿದೆ ಲಾಲಿತ್ಯಪೂರ್ಣ ಕವಿತೆ ಇದು..:)))

    ReplyDelete
  4. ಲಯ ಬದ್ದವಾಗಿದೆ, ಒಮ್ಮೆ ಹಾಡಿ ನೋಡಬೇಕು ಅನಿಸುತ್ತದೆ.

    ನನ್ನವಳನ್ನು ಕೇಳಿ ನೋಡಿ, ಹಾಡುತ್ತೇನೆ.

    ReplyDelete