Saturday 1 September 2012

ಬರ್ತಿದ್ದಾನೆ ಗಣಪ್ಪ



ಪ್ರತಿವರ್ಷದಂತೆ ಬರುವ ಗಣಪ್ಪ 
ಮನ್ನಿಸಿ ತಿದ್ದಲು ನಮ್ಮಯ ತಪ್ಪ 
ಮನೆಯಲಿ ಚಕ್ಕುಲಿ ಮೋದಕ ಲಡ್ಡು 
ಖರ್ಚಿಗೆ ಅಜ್ಜ ಕೊಡುವರು ದುಡ್ಡು

ಒಂದೊಂದು ಕೇರಿಯಲೊಂದೊಂದು ಭಂಗಿ 
ಹೊಟ್ಟೆ ಉಬ್ಸಿ ನಿಲ್ಲುತ್ತಾನೆ ಭಕ್ಷ್ಯವ ನುಂಗಿ 
ಎಲ್ಲೆಲ್ಲೂ ವಾದ್ಯ, ಗಂಟೆಯ ಘೋಷ
ನೋಡಲು ಸುಂದರ ಮಕ್ಕಳ ವೇಷ 

ಪೇಟೆಯಿಂದ ಹೂ ತರುವನು ಅಪ್ಪ 
ಅಮ್ಮ ಕೊಡುವಳು ಹೋಳಿಗೆ ತುಪ್ಪ 
ಎಲ್ಲರೂ ಸೇರಿ ಆಡ್ವೆವು ಗೋಲಿ 
ಆಮೇಲೆ ಹಾಕ್ಬೇಕು ಚೆಂದ ರಂಗೋಲಿ 

ಎಲ್ಲರೂ ಸೇರಿ ಗಣಪನ ಕರೆವ 
ಕೇಳುತ ವಿದ್ಯಾ ಬುದ್ಧಿಯ ವರವ 
ಪ್ರತಿ ಮನೆಯಲ್ಲೂ ನೆಲೆಸಲಿ ಗಣಪ 
ಕಳೆಯಲಿ ಸರ್ವರೂ ಮಾಡಿದ ಪಾಪ 

3 comments:

  1. ಬ್ಲಾಗ್ ಲೋಕದಲ್ಲಿನ ಕೊರತೆಯೊಂದನು ತುಂಬುವ ನಿಮ್ಮ ಪ್ರಯತ್ನಕ್ಕೆ ಮೆಚ್ಚಲೇಬೇಕು ಪರೇಶ್. ಸಫಲ ಪ್ರಸ್ತುತಿ. ಸುಂದರ ಅನುಭೂತಿ. ಶಿಶುಗೀತೆಗಳು ಇನ್ನಷ್ಟು ಬರಲಿ.

    ReplyDelete
  2. ಶಿಶು ಗೀಯೆ ಬರೆಯುವ ಕವಿಗಳ ಕೊರತೆ ತುಂಬುತ್ತಿದ್ದೀರಿ.

    ReplyDelete