ಯಾಕಿಂತು ಕುಳಿತಿರುವೆ ಯಾತಕದು ಮುನಿಸು
ನಿನ್ನ ಪರಿಯನು ನೋಡಿ ನಡುಗುತಿದೆ ಮನಸು
ಎದೆಯಂಗಳದಿ ನೀನು ಹಚ್ಚಿರುವ ಜ್ಯೋತಿ
ಕಿಚ್ಚಾಗಿ ಮೂಡಿಸಿದೆ ಮನದೊಳಗೆ ಭೀತಿ
ಅಂದು ನೀ ಎಂದಿದ್ದೆ ನಾ ಮನೆಯ ಚಿನ್ನ
ಇಂದೇಕೆ ಹೋಗೆಂದು ದೂಡುತಿಹೆ ಎನ್ನ
ಹೃದಯದಾಲಯದೊಳಗೆ ಕುಳಿತಿರಲು ನೀನು
ಮನೆಯ ತೊರೆಯಲು ನಿನ್ನ ಮರೆಯಬಹುದೇನು
ಅಕ್ಕರೆಯ ಸಕ್ಕರೆಯ ತಿನಿಸುತ್ತ ಬಂದೆ
ಕಷ್ಟ ಕೋಟಲೆಯಲ್ಲಿ ನಿನ ಜೊತೆಗೆ ನಿಂದೆ
ಇಂದೇಕೆ ಉರಿಯುತಿದೆ ಈ ತರದ ಉಲ್ಕೆ
ಹುಚ್ಚೆದ್ದು ಓಡುತಿದೆ ಬದುಕಿನಾ ನೌಕೆ
ಕೋಪ ತಾಪದಿ ನೀನು ಉರಿಯುತಿರೆ ಹೀಗೆ
ಎನ್ನ ಎದೆಯದು ಬಡಿವುದಾದರೂ ಹೇಗೆ
ಕೊಂದುಬಿಡು ಒಮ್ಮೆಲೇ ಬರಲೆನಗೆ ಸಾವು
ಸುಖವ ನಿನ ಬಳಿಯಿಟ್ಟು ಹೊತ್ತೊಯ್ವೆ ನೋವು
No comments:
Post a Comment