Monday 24 December 2012

ಜಗ ಎಷ್ಟು ಸುಂದರ


ಎಸಿ ಕಾರಿನಲ್ಲಿ 
ಹೋಗುತ್ತಿದ್ದ ಶ್ರೀಮಂತ 
ಹೇಳಿದ- 
"ಜಗ ಎಷ್ಟು ಸುಂದರ"
ಡ್ರೈವರ್ ಕಿಟಕಿಯ 
ಗಾಜು ಇಳಿಸಿದ!
---------------
ಯುದ್ಧದಲ್ಲಿ ಗೆದ್ದ 
ರಾಜನಿಗೆ 
ಹಿಂಬಾಲಕರ  ಜಯಕಾರ;
ಸತ್ತ ಸೈನಿಕರ 
ಬಂಧುಗಳ ರೋದನ 
ಅದರೊಡನೆ ಲೀನ!
-------------------
ಹೊಲಸು ಕಸವನ್ನು 
ಪಕ್ಕದ ಮನೆಗೆಸೆದ;
ಸೊಳ್ಳೆಗಳು 
ಇವನ ಮನೆಗೆ ಬಂದಿದ್ದವು !
----------------
ಪುಟ್ಟ ಮಗು 
ದೇವರಿಗೆ ಹೇಳಿತು-
"ಒಳ್ಳೇದು ಮಾಡಪ್ಪ"
ಪಕ್ಕದಲ್ಲಿದ್ದ ಅಪ್ಪ 
ಹೇಳಿಕೊಳ್ಳುತ್ತಿದ್ದ-
"ನನಗೆ, ನನ್ನ ಕುಟುಂಬಕ್ಕೆ 
ಒಳ್ಳೇದು ಮಾಡಪ್ಪ"
------------------
ದೇವಸ್ಥಾನದಲಿ 
ಗಂಟೆ ಬಾರಿಸಿ 
ಬಾರಿನಲ್ಲಿ ತೀರ್ಥ ಸೇವಿಸಿ 
ಮನೆಗೆ ಹೋಗಿ 
ಮಡದಿಗೆ ಬಾರಿಸುತ್ತಿದ್ದ!
------------------
ಇಂದು ಹಸಿವಾದಾಗ
ನಿನ್ನೆ ನಾ ತಟ್ಟೆಯಲ್ಲಿ 
ಬಿಟ್ಟ ಅನ್ನದ ಕಣಗಳು 
ಕಣ್ಣೆದುರು ಬಂದು 
ಮಾಯವಾದವು!

No comments:

Post a Comment