Monday 19 December 2011

ಕಡ್ಡಿ ಗೀರುವ ಸಂತ




ಬಂದನೊಬ್ಬ ಕಳ್ಳ ಸಂತ 
ಹೋಮ ಮಾಡಲು 
ಪ್ರೀತಿ ಪ್ರೇಮ ಧಾಮವನ್ನು
ನರಕ ಮಾಡಲು 
ಬೆಂಕಿ ಕಡ್ಡಿಗಳು 
ಇವನ ಕಮಂಡಲಗಳು 
ಬೀರು ವೋಡ್ಕಾ ವಿಸ್ಕಿಗಳು 
ಪುಣ್ಯ ಜಲಗಳು
ಎಲ್ಲಿ ಸುಖವು ಇರುವುದಲ್ಲಿ
ಕಡ್ಡಿ ಗೀರುವ 
ಕಿಡಿಯನೊಂದ ಹಾರಿಸಲ್ಲಿ
ಓಡಿ ಹೋಗುವ 
ಮನೆ ತುಂಬಾ ಬೆಂಕಿಯಾಗಿ
ಜನರನೆಲ್ಲ ಅದು ಸುಡುತಿರೆ
ಪಕ್ಕದಲ್ಲೆ ನಿಂತು ಇವನು
ಮೋಜು ನೋಡುವ 
ಓ ಗೆಳೆಯ, ಎಚ್ಚರಿಕೆ
ಹುಷಾರಾಗಿರು 
ಅಕ್ಕ ಪಕ್ಕ ಇಂಥವರು
ತಿರುಗುತಿರುವರು 
ಸಂತೋಷವ ನೋಡಿವರು
ಸಹಿಸಲಾರರು 
ಕೈಯಲ್ಲೇ ಹುಣಸೆ ಬೀಜ
ಹಿಡಿದು ಇರುವರು 
ಆಗ ಬೇಡ ಇವರ ಕಿಡಿಯ 
ಅಗ್ನಿ ವರ್ಧಕ 
ಬೆಂಕಿ ಆರಿಸಾಗು ನೀನು
ಅಗ್ನಿ ಶಾಮಕ 

2 comments:

  1. ಸುಡು ಬುದ್ಧಿ ಪಾಖಂಡಿಗಳ ಬಗ್ಗೆ ಒಳ್ಳೆಯ ಎಚ್ಚರಿಕೆ ಘಂಟೆ!
    ನನ್ನ ಬ್ಲಾಗಿಗೂ ಬನ್ನಿ.

    ReplyDelete
  2. ಬೆಂಕಿ ಕಡ್ಡಿ ಸಣ್ಣದಿದ್ದರೂ,ಊರೆಲ್ಲಾ ಸುಡುವಾಗ ಅದರ ತಾಕತ್ತು ಎದೆಯೊಳಗೆ ಕುಳಿತು ಬಿಡುತ್ತದೆ.ತುಂಬಾ ಚೆಂದದ ವಸ್ತು ವಿಷಯ ನಿಮ್ಮ ಕವಿತೆಯಲ್ಲಿ ಕಾಣಿಸಿತು. ಚೆನ್ನಾಗಿದೆ ಪರೇಷಣ್ಣ.

    ReplyDelete